ಸಿದ್ದರಾಮಯ್ಯ ಹೆಗಲಿಗೆ ಪವರ್’ಫುಲ್ ಜವಬ್ದಾರಿ ಹೊರಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ...!
ಕೇಂದ್ರ ರಾಜಕಾರ ಸದ್ಯ ರಂಗೇರುತ್ತಿದೆ. ಒಂದ್ ಮಂಡ್ಯ ರಾಜ್ಯ ರಾಜಕೀಯದಲ್ಲಿ ಹಾಟ್ ಸ್ಪಾಟ್ ಆದರೆ , ಇತ್ತ ಮಾಜಿ ಮುಖ್ಯಮಂತ್ರಿಗೆ ದೆಹಲಿಯಿಂದ ಮತ್ತೊಂದು ಬುಲಾವ್ ಬಂದಿದೆ. ಈ ಕಾರಣದಿಂದ ಸಿದ್ದರಾಮಯ್ಯ ಸದ್ಯ ಬಹಳ ಟೆನ್ಶನ್ ನಿಂದ ಓಡಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ಅಂದಹಾಗೇ ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಮಿಗೆ ಹೊಸ ಜವಬ್ದಾರಿಯೊಂದನ್ನು ಹೆಗಲಿಗೆ ವಹಿಸಿ ಹೋಗಿದ್ದಾರೆ.
ಅಂದಹಾಗೇ ರಾಹುಲ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯವ್ನನು ಮಾಧ್ಯಮಗಳು ಸೆರೆ ಹಿಡಿದೆವೆ.ಬೆಂಗಳೂರಿನ ಕಾರ್ಯಕ್ರಮ ಮುಗಿಸಿಕೊಂಡು ಹೊರಡುವ ಮುನ್ನ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯನವರ ಕೈ ಹಿಡಿದು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಏನೋ ಮಾತುಕತೆಯಲ್ಲಿ ತೊಡಗಿದ್ದರು. ಆದರೆ ಈ ಬಗ್ಗೆ ಪಕ್ಷದ ನಾಯಕರನ್ನು ಕೇಳಿದಾಗ ರಾಹುಲ್ ಆವರು, ಮಾಜಿ ಮುಖ್ಯಮಂತ್ರಿಗಳಿಎಗ ಕಿವಿಮಾತು ಹೇಳಿದ್ದಾರೆ. ಮೈತ್ರಿಯಲ್ಲಿ ಅಪಸ್ವರ ಬರದಂತೆ ನೋಡಿಕೊಳ್ಳಿ ಎಂದು ಹೇಳಿ ಹೋಗಿದ್ದಾರೆಂದು ತಿಳಿಸಿದ್ದಾರೆ.
ತುಮಕೂರಿನಲ್ಲಿ ಕ್ಯಾಂಡೆಡೇಟ್ ವಿಚಾರವಾಗಿ ಹೆಚ್ಚಿನ ಚರ್ಚೆ-ವಾಗ್ವಾದ ಮಾಡೋದು ಬೇಡ. ಅಭ್ಯರ್ಥಿಗಳ ಘೋಷಣೆ ಬಳಿಕ ಪಕ್ದದಲ್ಲಿ ಅಸಮಾಧಾನಿತರನ್ನು ನೀವೇ ಸಂಭಾಳಿಸಬೇಕು. ಮೈತ್ರಿ ಅಭ್ಯರ್ಥಿಗಳ ಪರವಾಗಿ ಒಗ್ಗೂಡಿ ಕೆಲಸ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದಹಾಗೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನು ಪ್ರತ್ಯೇಕವಾಗಿ ಡಿಸಿಎಂ ಪರಮೇಶ್ವರ್ ಸಮ್ಮುಖದಲ್ಲಿಯೇ ಕರೆದು ಕಿವಿಮಾತು ಹೇಳಿದ್ದಾರೆ. ಮಾಜಿ ಆದರೂ ಕಾಂಗ್ರೆಸ್ ನ ಪವರ್ ಫುಲ್ ಲೀಡರ್ ಸದ್ಯ ಸಿದ್ದರಾಮಯ್ಯ. ಆದರೆ ರಾಹುಲ್ ಗಾಂಧಿ ಹೇಳಿಕೆಯಿಂದ ಸ್ವಲ್ಪ ಟೆನ್ಶನ್ ಆಗಿದ್ದಾರಂತೆ ಸಿದ್ದರಾಮಯ್ಯ. ಈಗಾಗಲೇ ಮಂಡ್ಯ ಕ್ಷೇತ್ರದಿಂದಲೂ ಕಾಂಗ್ರೆಸ್ ಅಭ್ಯರ್ಥಿಯನ್ನು ಪಕ್ಷ ಕಳೆದುಕೊಂಡಿದೆ. ತುಮಕೂರಿನಲ್ಲಿ ಹೀಗೆ ಆದರೆ ನಿರಾಸ ನಾಯಕರನ್ನು ಹೇಗೆ ಸಮಾಧಾನ ಪಡಿಸೋದು ಎನ್ನೋದನ್ನು ಸ್ಟಡಿ ಮಾಡ್ತಿದ್ದಾರಂತೆ ಮಾಜಿ ಮುಖ್ಯಮಂತ್ರಿಗಳು.
Comments