ನಿಮ್ಮ ಅಕೌಂಟ್ ನಿಂದ ಹೆಚ್ಚು ಹಣ ವರ್ಗಾವಣೆಯಾಗುತ್ತಿದೆಯಾ.? ಹಾಗಾದ್ರೆ ಇಲ್ಲಿದೆ ಶಾಕಿಂಗ್ ನ್ಯೂಸ್..!!
ಲೋಕಸಭಾ ಚುನಾವಣೆಯ ದಿನಾಂಕ ಷೋಷಣೆಯಾಗಿರುವ ಹಿನ್ನಲೆಯಲ್ಲಿಯೇ ನೀತಿ ಸಂಹಿತೆಯು ಕೂಡ ಜಾರಿಯಾಗಿದೆ.ಅದರ ಹಿನ್ನಲೆಯಲ್ಲಿಯೇ ಚುನಾವಣ ಆಯೋಗ ಒಂದಿಷ್ಟು ಕ್ರಮಗಳನ್ನು ಕೈಗೊಂಡಿದೆ.ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು 50,000 ರೂ.ಗಿಂತ ಹೆಚ್ಚಿನ ಹಣವನ್ನು ಮತ್ತು 10,000 ರೂ.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.. ಬ್ಯಾಂಕುಗಳು ಮತ್ತು ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳ ಸಿಬ್ಬಂದಿ ಕೂಡ ಚುನಾವಣಾ ಆಯೋಗಕ್ಕೆ ಅಗತ್ಯ ದಾಖಲೆ ನೀಡಿ ಮೊದಲೇ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಿಮ್ಮ ಅಕೌಂಟ್ ನಿಂದ ಹೆಚ್ಚು ಹೆಚ್ಚು ಹಣ ವರ್ಗಾವಣೆಯಾಗುತ್ತಿದ್ದರೆ, ಅಂತಹ ಖಾತೆಗಳನ್ನು ಪರಿಶೀಲನೆ ಮಾಡಲಾಗುವುದು ಮದುವೆ ಅಥವಾ ಹುಟ್ಟುಹಬ್ಬ ಈ ರೀತಿಯ ಮುಂತಾದ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಅನುಮತಿ ಪಡೆಯುವ ಯಾವುದೇ ಅಗತ್ಯವಿಲ್ಲ. ಆದರೆ, ಸಾರ್ವಜನಿಕವಾಗಿ ಆಯೋಜಿಸುವ ನೆಪದಲ್ಲಿ ರಾಜಕೀಯ ವ್ಯಕ್ತಿಗಳು ಊಟದ ವ್ಯವಸ್ಥೆ ಮಾಡುವುದು ಸೇರಿದಂತೆ ಮತದಾರರನ್ನು ಓಲೈಕೆ ಮಾಡುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ… ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವಿಧದ ಪ್ರಚಾರದಲ್ಲಿ ಸೇನೆಯ ಯಾವುದೇ ರೀತಿಯ ಫೋಟೋ ಮತ್ತು ವಿಡಿಯೋ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಈ ನೀತಿ ಸಂಹಿತೆಯು ಕೇವಲ ದುಡ್ಡಿನ ವಿಚಾರಕ್ಕೆ ಮತ್ತು ಉಡುಗೊರೆಯ ವಿಚಾರಕ್ಕೆ ಮಾತ್ರ ಸೀಮಿತವಾಗಿಲ್ಲ..ಇದರ ಕಾವು ಸಿನಿಮಾಗಳಿಗೂ ಕೂಡ ಮುಟ್ಟಿದೆ.
Comments