ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ ಇನ್ನಿಲ್ಲ

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾತೆ ಮಾಹಾದೇವಿ ಅವರು ನಿಧನರಾಗಿದ್ಧಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತಿತ್ತು, ಹೀಗಾಗಿ ಅವರನ್ನು ಕಳೆದ ಏಳು ದಿನಗಳಿಂದ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾಗಿದ್ದಾರೆ ಎನ್ನಲಾಗಿದೆ.
ಒಂದು ವರ್ಷದಿಂದ ಮೂತ್ರ ಪಿಂಡದ ಕೊರತೆಯಿಂದ ಬಳಲುತ್ತಿರುವ ಮಾತೆ ಮಹಾದೇವಿ ಅವರು ಉಸಿರಾಟ ಮತ್ತು ಶ್ವಾಸಕೋಸದ ಸೋಂಕಿನಿಂದಲೂ ಬಳಲುತ್ತಿದ್ದರು. ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಿದ್ದು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿತ್ತು. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ, ದೆಹಲಿಯಲ್ಲಿಯೂ ಕೂಡ ಪ್ರತಿಭಟನೆ ಮಾಡಿದ್ದರು..ನಾಳೆ ಮಹಾದೇವಿ ಅವರ ಅಂತ್ಯಕ್ರಿಯೆ ಕೂಡಲ ಸಂಗಮದಲ್ಲಿ ನೇರವೇರಲಿದೆ ಎನ್ನಲಾಗಿದೆ. ಇನ್ನು ಇಂದು ಸಂಜೆ ತನಕ ಬೆಂಗಳೂರಿನಲ್ಲಿ ರಾಜರಾಜಿನಗರದದಲ್ಲಿರುವ ಬಸವಮಂಟದಲ್ಲಿ ಮಹಾದೇವಿ ಅವರ ಅಂತಿಮ ದರ್ಶನವನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.. ಸಾರ್ವಜನಿಕರು ಮಹಾದೇವಿಯವರ ಅಂತಿಮ ದರ್ಶನ ಪಡೆಯಬಹುದು.
Comments