ನನ್ನಂತೆ ಮಹಿಳೆಯರ ಮಧ್ಯೆ ನಿಂತು ಮಾತನಾಡಲೀ ಆ ಮೋದಿ ಎಂದು ಸವಾಲೆಸದ ನಾಯಕ ಯಾರು..?!!!

ಮೋದಿ ಮುಂದಿನ ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತಾರೋ ಗೊತ್ತಿಲ್ಲ. ಆದರೆ ವಿರೋಧ ಪಕ್ಷದ ನಾಯಕರು ಮಾತ್ರ ಮೋದಿ ಮುಂದಿನ ಪ್ರಧಾನಿಯಾಗೋ ಯಾವ ಲಕ್ಷಣಗಳು ಇಲ್ಲಾ, ಬಿಜೆಪಿ ಅಧಃಪತನಕ್ಕೆ ಇಳಿಯೋದು ಗ್ಯಾರಂಟಿ ಎನ್ನುತ್ತಿದ್ದಾರೆ. ರಾಹುಲ್ ಮತ್ತು ಮೋದಿ ನಡುವೆ ವಾಕ್ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಧಾನಿ ಹುದ್ದೆಗಾಗಿ ಪಕ್ಷದ ನಾಯಕರಲ್ಲಿ ದೊಡ್ಡ ಪೈಪೋಟಿಯೇ ಆರಂಭವಾಗಿದೆ. ಮೋದಿ ಸೋಲಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಅಂದಹಾಗೇ…
ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡುತ್ತಾ ಮೋದಿಗೆ ಮಹಿಳೆಯರೆಂದರೆ ಭಯ. ಮಹಿಳೆಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡದಕ್ಕಾಗದೇ ನಡುಗಿ ಹೋಗ್ತಾರೆ, ಮಹಿಳೆಯರ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯ ಮೋದಿಗಿಲ್ಲ ಎಂದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಚೆನ್ನೈನ ಸ್ವೆಲ್ಲಾ ಮಾರೀಸ್ ಕಾಲೇಜಿನಲ್ಲಿ ಮಾತನಾಡಿ, ನನ್ನಾಗೇ 3 ಸಾವಿರ ಮಹಿಳೆಯರ ಮಧ್ಯ ಪ್ರಧಾನಿ ಮೋದಿ ನಿಂತು ಮಾತನಾಡಲೀ. ಅವರು ನಿಂತಿದ್ದನ್ನುನೀವು ಎಷ್ಟು ಬಾರಿ ನೋಡಿದ್ದೀರಾ? ಬಹಿರಂಗವಾಗಿ ಪ್ರಧಾನಿ ಪ್ರಶ್ನೆ ಎದುರಿಸಿದ್ದನ್ನು ನೀವು ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಸದ್ಯ ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಸೈದ್ಧಾಂತಿಕ ಹೋರಾಟವಾಗಿದೆ. ಒಂದು ಸಿದ್ಧಾಂತ ಇಡೀ ದೇಶದ ಜನರು ಒಟ್ಟಾಗಿ ಬಾಳಬೇಕು, ಅವರಿಗೆ ಸಮಾನತೆ ಸಿಗಬೇಕೆಂಬುದು. ಹಾಗೂ ಎಲ್ಲರಿಗೂ ಒಂದೇ ಸಮನಾದ ನ್ಯಾಯ ಸಿಗಬೇಕೆಂಬುದು. ಆದರೆ ಮತ್ತೊಂದು ತತ್ವ(ಸಿದ್ದಾಂತ) ದಬ್ಬಾಳಿಕೆಯಿಂದ ಕೂಡಿದೆ. ನಾವು ಹೇಳಿದಂತೇ…ನಡೆಯಬೇಕೆಂಬುದು. ಇದು ದೌರ್ಜನ್ಯ. ಇದಕ್ಕೆ ಒಳಗಾಗಬಾರದು ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
Comments