ಅಂದು ರಮ್ಯಾ ಇದ್ದ ಜಾಗದಲ್ಲಿ ನಾನಿರಬೇಕಾಗಿತ್ತು, ಆದರೆ ಅದನ್ನು ತಪ್ಸಿದ್ದು ಅಂಬಿ : ಸುಮಲತಾ ಬಿಚ್ಚಿಟ್ಟ ಹಿಸ್ಟರಿ ಏನ್ ಗೊತ್ತಾ..?!!!
ಮಂಡ್ಯ ರಾಜಕಾರಣದಲ್ಲಿ ಹಿಂದೆಂದಿಗಿಂತೂ ದೊಡ್ಡ ಮಟ್ಟದ ರಾಜಕೀಯ ರಂಗ ಸಿದ್ಧವಾಗ್ತಿದೆ. ಘಟಾನುಘಟಿಗಳಿಗೆ ನಿದ್ದೆ ಕೆಡಿಸಿದೆ ಈ ಬಾರಿಯ ಲೋಕ ಸಭೆ ಚುನಾವಣೆ. ಮಂಡ್ಯ ರಾಜಕಾರಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸುಮಲತಾ ಸ್ಪರ್ಧೆಗೆ ರಾಷ್ಟ್ರೀಯ ಪಕ್ಷ ಆದಿಯಾಗಿ ಒಂದಷ್ಟು ನಾಯಕರು ತಾವು ಪರೋಕ್ಷವಾಗಿ ಸಪೋರ್ಟ್ ಮಾಡ್ತೀವಿ ಎಂದು ಒಮ್ಮೆ ಹೇಳಿದ್ರೆ, ಮತ್ತೆ ಕೆಲವು ಮಾಹಿತಿ ಪ್ರಕಾರ ಸುಮಲತಾಗೆ ಕೈ ಕೊಡೋಕೆ ಮಾಡಿರೋ ಪ್ಲ್ಯಾನ್ ಇದು ಎಂದು ಹೇಳಲಾಗುತ್ತಿದೆ. ಅದೇನೇ ಇರಲೀ, ಅದ್ಯಾರೇ ಬರಲೀ, ಬಿಡಲೀ. ಈ ಬಾರಿ ಮಂಡ್ಯದಿಂದ ನನ್ನ ಸ್ಪರ್ಧೆ ಖಚಿತ. ಈ ಸಲ ಮಂಡ್ಯದಿಂದ ನಾನು ಎಲೆಕ್ಷನ್ ಗೆ ನಿಂತು ತೀರುತ್ತೇನೆ ಎಂದಿರುವ ಅಂಬಿ ಪತ್ನಿ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ಮಾಧ್ಯಮವೊಂದರ ಸಂದರ್ಶನ ವೇಳೆ ಸುಮಲತಾ ಅವರು ಅಂದು ನಡೆದ ಸೀಕ್ರೇಟ್ ಮಾತುಕತೆಯನ್ನು ಬಹಿರಂಗಗೊಳಿಸಿದ್ದಾರೆ. ಇಂದು ನನಗೆ ರಾಜಕೀಯ ಸೇರುವುದು ಹೊಸದಲ್ಲ. ಈ ಹಿಂದೆಯೇ ನನಗೆ ಆಫರ್ ಬಂದಿತ್ತು. ಅದನ್ನು ತಪ್ಸಿದ್ದೇ ನನ್ನ ಪತಿ ಅಂಬಿ. ಅದಕ್ಕೆ ಕಾರಣವಿತ್ತು. ಇಂದು ನನಗೆ ಟಿಕೆಟ್ ಕೊಡಬಾರದು ಅಂತಾ ಹೇಳ್ತಾ ಇರುವವರೇ ಅಂದು ಟಿಕೆಟ್ ಕೊಡ್ತೀನಿ ಎಂದು ಮನೆ ಬಾಗಿಲಿಗೆ ಬಂದಿದ್ದರು ಎಂದು ಹೇಳಿದ್ದಾರೆ. ಅಂಬಿ ಮಣ್ಣಿನ ಋಣ ತೀರಿಸೋಕೆ ನನಗೆ ರಾಜಕೀಯ ಅನಿವಾರ್ಯವಾಗಿದೆ ಎಂದು ಹೇಳುವ ಸುಮಲತಾ, ಅಂದು ರಮ್ಯಾಗೆ ಸಿಕ್ಕ ಸ್ಥಾನವನ್ನತಾವೇ ಪಡೆದುಕೊಳ್ಳಬೇಕಾಗಿತ್ತು.. ಆದರೆ ಅಲ್ಲಿ ನಡೆದಿದ್ದೇ ಬೇರೆ ಎಂದು ಆ ದಿನದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.ಅಂಬಿ ಇದ್ದಾಗಲೇ ನನಗೆ ಎಲೆಕ್ಷನ್ ಗೆ ನಿಲ್ಲುವ ಅವಕಾಶ ಇತ್ತು.2013ರ ಮಂಡ್ಯ ಬೈ ಎಲೆಕ್ಷನ್‌ನಲ್ಲೇ ಸುಮಲತಾ ಅಂಬರೀಷ್ ಹೆಸರು ಕೇಳಿಬಂದಿದ್ದು, ಸುಮಲತಾ ಚುನಾವಣೆಗೆ ನಿಲ್ಲೋ ವಿಚಾರವನ್ನ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರಂತೆ.
ಆದರೆ ಅಂಬಿ ನನಗೆ ಸಿಕ್ಕ ಅವಕಾಶವನ್ನು ಬೇಡ ಎಂದು ನಯವಾಗಿ ಹೇಳಿದ್ದರಂತೆ. ನನ್ನನ್ನು ಬೇರೆಯವರು ಬೆಳೆಸಿದ್ದು, ನಾವು ಬೇರೆಯವರನ್ನು ಬೆಳೆಸೋಣವೆಂದರಂತೆ, ಆ ಕಾರಣಕ್ಕಾಗಿಯೇ ನನ್ನ ಬದಲು ಕಾಂಗ್ರೆಸ್’ನಿಂದ ರಮ್ಯಾ ಅವರಿಗೆ ಟಿಕೆಟ್ ಸಿಕ್ಕಿದ್ದು. ಅಂಬಿಯವರ ಸಜೆಸ್ಟ್ ಅಂತೆ ರಮ್ಯಾಗೆ ಟಿಕೆಟ್ ಕೊಡಲಾಗಿತ್ತು ಎಂಬುದನ್ನು ಸುಮಲತಾ ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಒಂದು ವೇಳೆ ರಮ್ಯಾ ಬದಲು ಸುಮಲತಾಗೆ ಟಿಕೆಟ್ ಸಿಕ್ಕಿದಿದ್ದರೆ ಅವರು ಸಂಸದೆಯಾಗುತ್ತಿದ್ದರು.ಆದರೆ ನಾನು ಈ ಬಾರಿ ಜನರ ಸೇವೆಗಾಗಿ, ಅಂಬಿ ಹೆಸರನ್ನು ಉಳಿಸೋದಿಕ್ಕಾಗಿ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಮೇಲೆ ನಂಬಿಕೆ ಇದೆ. ಅವರು ನನ್ನನ್ನು ಕೈ ಬಿಡೋದಿಲ್ಲ ಎಂಬ ಭರವಸೆಯಿಂದ ಈ ಬಾರಿ ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದರು.
Comments