ಮೋದಿ ಮಾಡಿದ ಆ ಟ್ವೀಟ್'ಗೆ ಸಿಕ್ಕಾಪಟ್ಟೆ ಖುಷಿಪಟ್ರು ಕನ್ನಡಿಗರು …?!!!

ಅಂದಹಾಗೇ ಚುನಾವಣಾ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರು ರಾಜ್ಯ ರಾಜಕೀಯ ಅಖಾಡಕ್ಕೆ ಇಳಿಯುತ್ತಾರೆ. ಈ ಹಿಂದೆ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ, ರಾಹುಲ್ ಗಾಂಧಿ ಅವರು ಕರ್ನಾಟಕ್ಕೆ ಬಂದು ಕನ್ನಡ ಭಾಷೆ ಮೂಲಕ ಭಾಷಣ ಮಾಡಿ ಕನ್ನಡಿಗರ ಮನ ಗೆದ್ದಿದ್ದರು. ಒಂದಷ್ಟು ಮಂದಿ, ರಾಷ್ಟ್ರ ನಾಯಕರ ಬಾಯಲ್ಲಿ ಕನ್ನಡ ಕೇಳಿ, ಕಿವಿ ತಂಪಾಯ್ತು ಎಂದರೆ, ಸರಿಯಾಗಿ ಉಚ್ಛರಿಸದೇ ನಮ್ಮ ಸುಮಧುರ ಭಾಷೆಯನ್ನು ಹಾಳು ಮಾಡಿಬಿಟ್ರು ಎಂದು ಟ್ರೊಲ್ ಕೂಡ ಮಾಡಿದ್ರು. ಅದೇನೇ ಇರಲಿ. ಸದ್ಯ ಮೋದಿಯವರು ಮಾತನಾಡಿದ ಕನ್ನಡಕ್ಕೆ ಕನ್ನಡಿಗರೇ ಫಿದಾ ಆಗಿಬಿಟ್ಟರು.
ಭಾಷಣದ ಆರಂಭದಲ್ಲಿ ಬಸವಣ್ಣ, ಸರ್ವಜ್ಞ ನ ವಚನಗಳನ್ನು ಹೇಳುವ ಮೂಲಕ ಕನ್ನಡಾಭಿಮಾನಿಗಳನ್ನು ಸೆಳೆದ್ರು. ಇದೀಗ ಕನ್ನಡದ ಬಗ್ಗೆ ಮಾತನಾಡಿ, ಕನ್ನಡವನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದ್ದಾರೆ ಮೋದಿ. ಕನ್ನಡ ಭಾಷೆಯನ್ನು ಹೊಗಳಿ ಕನ್ನಡ ಒಂದು ಸುಂದರ ಭಾಷೆ ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಮೋದಿ ಟ್ವೀಟ್ ಗೆ ಕನ್ನಡಿಗರು ಫುಲ್ ಖುಶಿಯಾಗಿದ್ದು ಮೋದಿಗೆ ಧನ್ಯವಾದ ತಿಳಿಸುತ್ತಿದ್ದಾರೆ.ಮೋದಿ ಅಭಿಮಾನಿ ಸಹನಾ (ರೇಣುಕಾ) ಹೋಳಿಮಠ ಎಂಬುವವರು ಕಳೆದ ಮಾರ್ಚ್ 6 ರಂದು, 'ಮೋದಿಜೀ ಕನ್ನಡದಲ್ಲಿ ಮಾತನಾಡಿದ ಆ ಕ್ಷಣ ಎಷ್ಟು ಖುಷಿ ಆಗುತ್ತೆ ಅಲ್ವಾ?' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮಾರ್ಚ್ 11 ರಂದು ಟ್ವೀಟ್ ಮೂಲಕ ಉತ್ತರಿಸಿದ ಪ್ರಧಾನಿ ಮೋದಿ, 'ಕನ್ನಡ ಒಂದು ಸುಂದರ ಭಾಷೆ' ಎಂದು ವರ್ಣನೆ ಮಾಡಿದ್ದಾರೆ. ಅಂದಹಾಗೇ ಮೋದಿ ಟ್ವೀಟ್’ನ್ನು ಅನೇಕ ಜನ ಶೇರ್ ಮಾಡಿದ್ದಾರೆ. ರೀ ಟ್ವೀಟ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
Comments