ರಾಜಕೀಯದಲ್ಲಿ ಮತ್ತೆ ಒಂಟಿಯಾದ ಸುಮಲತಾ...? ಸಪೋರ್ಟ್ ಮಾಡ್ತೀವಿ ಎಂದವರು ಹಿಂದೆ ಸರಿದ್ರು..?!!!
ಅಂದಹಾಗೇ ಲೋಕ ಸಮರ ಆರಂಭವಾಗಿದೆ. ಒಂದು ಕಡೆ ರೆಬೆಲ್ ಅಂಬಿ ಪತ್ನಿ ಸುಮಲತಾ ರಾಜಕೀಯ ನಡೆ ಗೊಂದಲಮಯವಾಗಿದೆ. ಇತ್ತ ಕುಮಾರ ಸ್ವಾಮಿ ಪುತ್ರ ನಿಖಿಲ್ ನನಗೊಂದು ಅವಕಾಶ ಕೊಡಿ ಪ್ಲೀಸ್ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ನಾನು ಮಂಡ್ಯದ ಋಣ ತೀರಿಸಬೇಕು, ಅಂಬಿ ಆಸೆ ಈಡೇರಿಸಬೇಕು ನನಗೆ ಈ ಬಾರಿ ಅವಕಾಶ ಕೊಡಿ ಎಂದಿದ್ದಾರೆ ನಟಿ ಸುಮಲತಾ. ಒಟ್ಟಾರೆ ಲೋಕಸಭೆ ಚುನಾವಣ ಹಾಟ್ ಸ್ಪಾಟ್ ಆಗಿರುವ ಮಂಡ್ಯ ಕ್ಷೇತ್ರ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರ್ ಅವರ ಸ್ಪರ್ಧೆಯಿಂದಾಗಿ ಗಮನ ಸೆಳೆದಿದೆ. ಸುಮಲತಾಗೆ ನಾವು ಬೆಂಬಲ ಕೊಡ್ತೀವಿ, ಪಕ್ಷೇತರ ಅಭ್ಯರ್ಥಿಯಾಗಿ ನಿಂತರ ನಾವು ಖಂಡಿತಾ ಸಪೋರ್ಟ್ ಮಾಡ್ತಿವಿ ಎಂದಿದ್ದವರು ಇದೀಗ ಹಿಮದೆ ಸರಿದಿದ್ದಾರೆ. ಮಂಡ್ಯದಿಂದ ಆಗೊಂದು ವೇಳೆ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದೇ ಆದರೆ ಅವರಿಗೆ ರಾಷ್ಟ್ರೀಯ ಪಕ್ಷವೊಂದು ಬೆಂಬಲ ನೀಡಲಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು.
ಆದರೆ ಇದೀಗ ಮತ್ತೊಂದು ಅಚ್ಚರಿ ನಡೆದಿದೆ. ಸುಮಲತಾಗೆ ಸಪೋರ್ಟ್ ನೀಡ್ತಿನಿ ಎಂದಿದ್ದ ಬಿಜೆಪಿ ತನ್ನ ಪಕ್ಷದಿಂದ ಸ್ಪರ್ಧಿಯನ್ನು ಕಣಕ್ಕಿಳಿಸಲು ರೆಡಿಯಾಗಿದೆ. ಅದಕ್ಕಾಗಿ ಪೂರ್ವ ತಯಾರಿ ನಡೆದಿದೆ. ಸುಮಲತಾಗೆ ಬೆಂಬಲ ಕೊಡ್ತೀವಿ, ಅವರು ಪಕ್ಷೇತರರಾಗಿ ಚುನಾವಣೆಗೆ ನಿಂತರೆ ನಾವು ಸುಮಲತಾ ಪರ ಇರ್ತೀವಿ ಎಂದ ಬಿಜೆಪಿ ಈಗ ಹಿಂದೆ ಸರಿದಿದೆ. ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಬಿಜೆಪಿ ಮುಖಂಡರು ಮಾತನಾಡಿ ಒಂದೊಮ್ಮೆ ನಾವು ಬಿಜೆಪಿಯಿಂದ ಯಾವ ಸ್ಪರ್ಧಿಯನ್ನು ಮಂಡ್ಯ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಲಿಲ್ಲವೆಂದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಸೊ…ನಾವು ಸ್ಪರ್ಧಿಯೊಬ್ಬರನ್ನು ತಯಾರಿ ಮಾಡಲೇ ಬೇಕು ಎಂದಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಲು ಬಿಜೆಪಿ ಈ ಮೊದಲು ಯೋಜಿಸಿತ್ತು. ಆದರೆ ಸುಮಲತಾ ಅವರು ಯಾವ ಪಕ್ಷ, ಪಕ್ಷದ ನಾಯಕರು ನನಗೆ ಸಪೋರ್ಟ್ ಬೇಡ, ಮಂಡ್ಯದ ಜನತೆ ಇದ್ದರೇ ಸಾಕು ನಾನು ಗೆದ್ದು ಬರ್ತೇನೆ ಎಂದಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಮಲತಾ ಪ್ರಚಾರದ ಭರಾಟೆಯನ್ನು ಆರಂಭಿಸಿದ್ದಾರೆ.ಮಂಡ್ಯದ ಹಳ್ಳಿ ಹಳ್ಳಿಗಳಲ್ಲಿ ಕ್ಯಾಂಪೇನ್ ಆರಂಭಿಸಿದ್ದಾರೆ.
Comments