ವೋಟರ್ ಐಡಿ ಇಲ್ಲದಿದ್ದರೂ ಚಿಂತೆ ಬೇಡ ಈ ದಾಖಲೆಗಳು ಇದ್ದರೆ ಸಾಕು ನೀವು ವೋಟ್ ಹಾಕಬಹುದು…!!

ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಯಾವ ಅಭ್ಯರ್ಧಿ ಪ್ರಜೆಗಳ ಏಳಿಗೆಗಾಗಿ ಶ್ರಮಿಸುತ್ತಾರೋ ಅವರನ್ನು ಆಯ್ಕೆ ಮಾಡುವುದು ಮತದಾರರ ಕರ್ತವ್ಯವಾಗಿರುತ್ತದೆ… 18 ವರ್ಷ ತುಂಬಿದ ಪ್ರತಿಯೊಬ್ಬರು ಕೂಡ ತಮಗೆ ಇಷ್ಟ ಬಂದ ಅಭ್ಯರ್ಥಿಯನ್ನು ಆರಿಸುವ ಸ್ವತಂತ್ರವಿರುತ್ತದೆ… ಮತದಾನ ಮಾಡಲು ಅವಶ್ಯಕತೆ ಇರುವುದು ವೋಟರ್ ಐಡಿ.. ಕೆಲವರ ಬಳಿ ವೋಟರ್ ಐಡಿ ಇರುವುದಿಲ್ಲ.. ಹೇಗಪ್ಪಾ ವೋಟ್ ಹಾಕುವುದು ಎಂಬ ಗೊಂದಲ ಶುರುವಾಗಿರುತ್ತದೆ..
ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಇಂದು ಮಾಧ್ಯಮಗೋಷ್ಠಿ ನಡೆಸಿ ಬಹು ಮುಖ್ಯ ಮಾಹಿತಿಯೊಂದನ್ನು ತಿಳಿಸಿದರು.. ಇನ್ನು ಫೆ. 28 ರಂದು ಚುನವಣಾ ಆಯೋಗ ತನ್ನ ನಿರ್ದೇಶನದಲ್ಲಿ 11 ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ವೋಟರ್ ಐಡಿ ಬದಲಾಗಿ ಬಳಸಲು ಅನುಮತಿ ನೀಡಿದೆ. ಈ ಕೆಳಗೆ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಪ್ರಸ್ತುತಪಡಿಸುವ ಮೂಲಕ ಮತದಾನ ಮಾಡಬಹುದಾಗಿದೆ ಅಂತ ತಿಳಿಸಿದ್ದಾರೆ.
ಪಾಸ್ ಪೋರ್ಟ್
ಡ್ರೈವಿಂಗ್ ಲೈಸನ್ಸ್
ಕೇಂದ್ರ/ರಾಜ್ಯ/ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ
ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ನೀಡಿರುವ ಪಾಸ್ ಬುಕ್ಗಳು
ಪ್ಯಾನ್ ಕಾರ್ಡ್
ಆರ್ಜಿಐ ಮತ್ತು ಎನ್ಪಿಆರ್ ಮೂಲಕ ನೀಡಿರುವ ಸ್ಮಾಟ್ ಕಾರ್ಡ್
ಉದ್ಯೋಗ ಖಾತ್ರಿ ಗುರುತಿನ ಚೀಟಿ
ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
ಭಾವಚಿತ್ರ ಹೊಂದಿರುವ ಪೆನ್ಶನ್ ಕಾರ್ಡ್ಗಳು
ಲೋಕಸಭಾ ಸದಸ್ಯರುಗಳು/ರಾಜ್ಯಸಭಾ ಸದಸ್ಯರುಗಳು/ಶಾಸಕರು/ವಿಧಾನಸಭಾ ಸದಸ್ಯರುಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
ಆಧಾರ್ ಕಾರ್ಡ್
ಇವುಗಳಲ್ಲಿ ಯಾವುದಾದರೂ ಒಂದು ಇದ್ದರೂ ಸಾಕು ನೀವು ಮತದಾನ ಮಾಡಬಹುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ…
Comments