ಚುನಾವಣೆ ಡೇಟ್ ಅನೌನ್ಸ್ ಆಗುತ್ತಿದ್ದಂತೇ ನೆಚ್ಚಿನ ಪಕ್ಷ ಸೇರಿದ ಹಾಸ್ಯ ನಟ…?!!!

ಅಂದಹಾಗೇ ಲೋಕಸಭೆ ಚುನಾವಣೆ ಡೇಟ್ ಫಿಕ್ಸ್ ಆಗಿದೆ. ರಾಜಕೀಯ ಕದನ ಶುರುವಾಗಿದೆ. ಅಭ್ಯರ್ಥಿಗಳಲ್ಲೇ ಟಿಕೆಟ್ ಪೈಪೋಟಿ ಹೆಚ್ಚಾಗುತ್ತಿದೆ. ಈ ನಡುವೆ ಕೆಲ ಸ್ಟಾರ್ ಗಳು ತಾವು ಯಾರ ಪ್ರಚಾರ ಮಾಡ್ತೀವಿ, ಪಕ್ಷ ಸೇರಿಕೊಳ್ತೀವಿ ಎಂಬ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅಂದಹಾಗೇ ತೆಲುಗು ಸಿನಿಮಾಗಳ ಹಾಸ್ಯ ನಟ ಅಲಿ ಅವರು ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ ಸೇರ್ಪಡೆಗೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ.
ಅಂದಹಾಗೇ ತೆಲುಗು ದೇಶಂ ಪಾರ್ಟಿ ಸೇರಿದಂತೇ ಮೂರು ಪಕ್ಷಗಳು ಅಲಿ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಚಿಂತಿಸುತ್ತಿದ್ದವು.ಈ ನಡುವೆ ಅಲಿ ಅವರು ವೈಎಸ್‍ಆರ್ ಪಕ್ಷದ ಜಗಮೋಹನ್ ರೆಡ್ಡಿ ಅವರನ್ನು ಇಂದು ತಮ್ಮ ನಿವಾಸ ಲೋಟಸ್ ಪಾಂಡ್‍ನಲ್ಲಿ ಭೇಟಿ ಮಾಡಿ ಔಪಚಾರಿಕವಾಗಿ ಪಕ್ಷ ಸೇರ್ಪಡೆಗೊಂಡರು. ಅಂದಹಾಗೇ ಅಧಿಕೃತವಾಗಿ ರಾಜಕೀಯ ಸೇರಿರುವ ಅಲಿ ಅವರು ವಿಜಯವಾಡದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಅಂದಹಾಗೇ ಅಲಿ ಅವರು ತಮ್ಮ ರಾಜಕೀಯ ನಡೆ ಬಗ್ಗೆ ಮಾತನಾಡಿ, ನಾನು ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ.
ನನ್ನ ಕಾರ್ಯಗಳು ಜನರಿಗೆ ಹತ್ತಿರವಾಗುವವರು. ಪಕ್ಷವು ,ನನಗೆ ಸೂಕ್ತವಾದ ಸ್ಥಾನ ನೀಡಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಜಗನ್ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರಿಂದ ಪಕ್ಷಕ್ಕೆ ಸೇರ್ಪಡೆಯಾದೆ ಎಂದು ಅಲಿ ತಿಳಿಸಿದರು. ಏತನ್ಮಧ್ಯೆ, ವೈಎಸ್‍ಆರ್ ಅಧ್ಯಕ್ಷರು ನಟ ಜೂನಿಯರ್ ಎನ್‍ಟಿಆರ್ ಅವರ ಮಾವ ನಾರ್ನೆ ಶ್ರೀನಿವಾಸ ರಾವ್ ಅವರನ್ನು ಇತ್ತೀಚೆಗೆ ಪಕ್ಷದ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕ ಮಾಡಿದ್ದಾರೆ.
Comments