ಕನ್ನಡದ ಉಪ್ಪು ತಿಂದು ಕನ್ನಡಿಗರಿಗೆ ಅವಮಾನ ಮಾಡಿದ ರಮ್ಯಾ..?!!!
ಸದಾ ವಿವಾದಗಳಿಂದಲೇ ಹೆಚ್ಚುಸುದ್ದಿಯಾಗುತ್ತಿರುವ ಮಾಜಿ ಸಂಸದೆ, ನಟಿರಮ್ಯಾ ಅವರು ಇದೀಗ ಮತ್ತೆ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ… ಕೆಲ ದಿನಗಗಳ ಹಿಂದಷ್ಟೆ ಪ್ರಧಾನಿ ಮೋದಿಯವರನ್ನು ಟೀಕಿಸಿ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದರು.. ಪ್ರಧಾನಿಯನ್ನು ಟೀಕಿಸುವ ನೀವು ಒಮ್ಮೆಯಾದರೂ ಮಂಡ್ಯಗೆ ಧೈರ್ಯ ಇದ್ದರೆ ಹೋಗಿ ಬನ್ನಿ ಎನ್ನುವ ಮಾತನ್ನು ಕೂಡ ಹೇಳಿದ್ದರು… ಯಾವುದೇ ಟ್ವೀಟ್ ಮಾಡಿದರೂ ಕೂಡ ಒಂದಲ್ಲ ಒಂದು ಮಿಸ್ಟೇಕ್ ಮಾಡುವ ಪದ್ಮಾವತಿ ಮತ್ತೆ ಸುದ್ದಿಯಲ್ಲಿದ್ದಾರೆ..
ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಮಾ ಅವರು ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿ ತೆಲುಗಿನಲ್ಲಿ ಟ್ವೀಟ್ ಮಾಡಿದ್ದಾರೆ. ಕನ್ನಡದ ಒಂದೇ ಒಂದು ಪದ ಕೂಡ ಅವರ ಟ್ವೀಟ್ನಲ್ಲಿ ಇಲ್ಲ. ತೆಲುಗಿನಲ್ಲಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ. ಸಿನಿಮಾ ಮಾಡಿದ್ದು ಕನ್ನಡದಲ್ಲಿ, ರಾಜಕಾರಣ ಕರ್ನಾಟಕದಲ್ಲಿ, ಹೆಸರು ಮಾಡಿದ್ದೂ ಕನ್ನಡ ಭೂಮಿಯಲ್ಲಿ ಹೀಗಿರುವಾಗ ಕನ್ನಡಿಗರ ಬಗ್ಗೆ ಒಂದು ಮಾತನಾಡದ ರಮ್ಯಾ ರೆಬೆಲ್ ಸಾವಿಗೂ ಬರದೇ ಅವಮಾನಿಸಿದ್ದರು. ರಮ್ಯಾ ಅವರ ಈ ಟ್ವೀಟ್ ಗೆ ಕನ್ನಡಿಗರು ಗರಂ ಆಗಿದ್ದು, ಕನ್ನಡತಿಯಾಗಿ, ಕನ್ನಡಿಗರಿಂದ ಹಿಂದೆ ಸಂಸತ್ತಿಗೆ ಹೋಗಿದ್ದ ರಮ್ಯಾಗೆ ಇವತ್ತು ಕನ್ನಡ ಬೇಕಿಲ್ವಾ? ರಮ್ಯಾ ನಟಿಯಾಗಿ ರಾಜಕಾರಣಿಯಾಗಿ ಯಶಸ್ಸು ಕಂಡಿದ್ದು ಕನ್ನಡದಲ್ಲಿ, ಕನ್ನಡಿಗರಿಂದ, ಕನ್ನಡದ ನೆಲದಲ್ಲಿ ಹೀಗಿದ್ದರೂ ಇಂದು ಕನ್ನಡ ರಮ್ಯಾ ಅವರಿಗೆ ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments