'ಅಯೋಧ್ಯ ರಾಮಮಂದಿರ' ಪ್ರಕರಣ ಸುಪ್ರೀಂ ತೀರ್ಪು : ಹೊರಬಿತ್ತು ಮಹತ್ವದ ಆದೇಶ..?!!!

ಅಯೋಧ್ಯೆ ರಾಮ ಮಂದಿರ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್’ನಲ್ಲಿ ವಿಚಾರಣೆ ಇತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದಲ್ಲಿ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಮಹತ್ವದ ಆದೇಶವೊಂದನ್ನು ನೀಡಿದೆ. ಈ ಸಂಬಂಧ ರಾಮ ಜನ್ಮ ಭೂಮಿ –ಬಾಬರಿ ಮಸೀದಿ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ವಿಚಾರಣೆಯಲ್ಲಿ ಹೇಳಿದೆ. ಅದು ಕಾಲಮಿತಿಯೊಳಗೆ ಪ್ರಕರಣವನ್ನು ಬಗೆಹರಿಸಿಕೊಳ್ಳಬೇಕು. ಸಂಧಾನ ಪ್ರಕ್ರಿಯೆ ಗೌಪ್ಯವಾಗಿರಬೇಕು, ರಹಸ್ಯವಾಗಿ ನಡೆಯುವ ಪ್ರಕ್ರಿಯೆ ಎಲ್ಲಿಯೂ ಸೋರಿಕೆಯಾಗಬಾರದು ಎಂದು ನ್ಯಾಯಮೂರ್ತಿಯೊಂಗಣ ಪೀಠ ಆದೇಶ ನೀಡಿದೆ.
ಅಯೋಧ್ಯ ರಾಮ ಮಂದಿರದ ಪ್ರಕರಣವನ್ನು ಇತ್ಯರ್ಥವಾಗಲು ಸುಪ್ರೀಂ ಕೋರ್ಟ್ ಮೂವರು ಸಂಧಾನಕಾರರನ್ನು ನೇಮಕ ಮಾಡಿದ್ದು, ಇಬ್ರಾಹಿಂ ಖಲೀಫುಲ್ಲಾ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆ ಒಂದು ವಾರದೊಳಗೆ ಆರಂಭವಾಗಬೇಕು. ನಾಲ್ಕು ವಾರದಲ್ಲಿ ಸಂಧಾನದನಾಲ್ಕು ವಾರದಲ್ಲಿ ಸಂಧಾನದ ಫಲಶುತಿ ಲಭಿಸಬೇಕು .ಎರಡು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಉತ್ತರಪ್ರದೇಶದ ಫೈಝಾಬಾದ್‌ನಲ್ಲಿ ಸಂಧಾನ ಪ್ರಕ್ರಿಯೆ ನಡೆಯಲಿದೆ. ಅಂದಹಾಗೇ ಹಿಂದೂ-ಮುಸ್ಲೀಂ ಮುಖಂಡರು ಸಂಧಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಂಧಾನ ಪ್ರಕ್ರಿಯೆಯಲ್ಲಿ ಹಲವು ಮಾತುಕತೆಗಳು ನಡೆಯಲಿದ್ದು, ಸಂಧಾನದ ಅಂತಿಮ ತೀರ್ಪು ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
Comments