ವಿಂಗ್ ಕಮಾಂಡರ್ ಅಭಿನಂದನ್ ರಾಜಕೀಯಕ್ಕೆ ಎಂಟ್ರಿ…!!?

ಪುಲ್ವಾಮ ದಾಳಿಯ ನಂತರ ನಮ್ಮ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆದವು.. ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಆದ ಅಭಿನಂದನ್ ಅವರನ್ನು ಪಾಕಿಸ್ತಾನ್ ಬಂಧಿಸಿಟ್ಟಿತ್ತು.. ಆ ಸಮಯದಲ್ಲಿ ಅಭಿನಂದನ್ ಹೆಸರು ತುಂಬಾ ಫೇಮಸ್ ಆಯಿತು… ನಮ್ಮ ದೇಶಕ್ಕಾಗಿ ಹೋರಾಡಿದ ಅಭಿನಂದನ್ ಅವರನ್ನು ಎಲ್ಲರೂ ತುಂಬಾ ಪ್ರೀತಿಯಿಂದ ಗೌರವಿಸಿದರು… ಇದೀಗ ಅಭಿನಂದನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರ ಎಂಬ ಮಾತು ಕೇಳಿ ಬರುತ್ತಿದೆ..
ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ದೆಹಲಿ ಮುಖ್ಯಮಂತ್ರಿಯಾದ ಅರವಿಂದ ಕೇಜ್ರೀವಾಲ್ ರಾಜಕೀಯಕ್ಕೆ ಆಹ್ವಾನಿಸಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ ಎನ್ನುವ ಸ್ಕ್ರೀನ್‌ಶಾಟ್ ಚಿತ್ರವನ್ನು ಪೋಸ್ಟ್ ಮಾಡಲಾಗುತ್ತಿದೆ. ಅದರಲ್ಲಿ, ' ಒಂದು ವೇಳೆ ವಿಂಗ್ ಕಮಾಂಡರ್ ತಮ್ಮ ಸೇವೆಯಿಂದ ನಿವೃತ್ತಿ ಬಯಸಿದಲ್ಲಿ, ಅವರು ಬಯಸಿದ ಕ್ಷೇತ್ರದಲ್ಲಿ ಲೋಕಸಭಾ ಟಿಕೆಟ್ ನೀಡಲು ಸಿದ್ಧ' ಎಂದು ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. @Satyanewshiಎಂಬ ಹೆಸರಿನ ಟ್ವೀಟರ್ ಖಾತೆ ಈ ಫೋಟೋವನ್ನು ಪೋಸ್ಟ್ ಮಾಡಿದೆ. ಆ ಪೋಸ್ಟ್ ಇದೀಗ ವೈರಲ್ ಆಗಿದೆ. ಆದರೆ ಈ ಟ್ವೀಟ್‌ನ ಪರಿಶೀಲಿಸಿದಾಗ ಇದು ನಕಲಿ ಟ್ವೀಟ್ ಎಂಬುದು ಬಯಲಾಗಿದೆ. ಒಟ್ಟಾರೆ ಸಾಮಾಜಿಕ ಜಾಲತಾಣಗಳನ್ನು ಈ ರೀತಿಯಾಗಿ ಬಳಸಿಕೊಳ್ಳುವುದರಿಂದ ಸಾಕಷ್ಟು ತೊಂದರೆಗಳು ಆಗುವುದು ಅನಿವಾರ್ಯ…
Comments