SBI ಗ್ರಾಹಕರೇ ಇತ್ತ ಗಮನಿಸಿ : ಬದಲಾಗಿದೆ ಬ್ಯಾಂಕಿನ ರೂಲ್ಸ್..?!!!

ದೇಶದ ಅತೀದೊಡ್ಡ ಬ್ಯಾಂಕ್ ಎಸ್’ಬಿಐ ತಮ್ಮ ಗ್ರಾಹಕರಿಗೆ ಸೂಚನೆಯೊಂದನ್ನು ಹೊರಡಿಸಿದೆ. ಬ್ಯಾಂಕಿನ ಕೆಲ ಹಳೆಯ ರೂಲ್ಸ್'ಗಳನ್ನು ಬದಲಾವಣೆ ಮಾಡಲಾಗಿದೆ. ಅಂದಹಾಗೇ ಎಸ್ ಬಿ ಐ ತನ್ನ ಸೇವೆಯಲ್ಲಿ ತಂದ ಕೆಲ ಬದಲಾವಣೆ ಯಿಂದಾಗಿ ಗ್ರಾಹಕರಿಗೆ ಅನುಕೂವಾಗಲಿದೆ.ಈ ಹಿಂದೆ ಎಸ್ಬಿಐನಿಂದ ಕೇವಲ 20 ಸಾವಿರ ಹಣ ಮಾತ್ರ ಡ್ರಾ ಮಾಡಬಹುದಿತ್ತು. ಆದರೆ ಈಗ ಕೆಲ ನಿಯಮಗಳ ಬದಲಾವಣೆಯಿಂದ SBI ನಿಂದ ಮಾಡುವ ಹಣ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಿದೆ.
ಎಸ್.ಬಿ.ಐ., ಡಿಜಿಟಲ್ ವಹಿವಾಟು ಹೆಚ್ಚಿಸಲು ಮತ್ತು ಎಟಿಎಂ ವಂಚನೆ ನಿಯಂತ್ರಿಸಲು ಹಣ ವಿತ್ ಡ್ರಾ ಮಿತಿಯನ್ನು ಕಡಿತಗೊಳಿಸಿತ್ತು. ಆದ್ರೀಗ ಎಸ್.ಬಿ.ಐ. ಪ್ಲಾಟಿನಂ ಕಾರ್ಡ್ ಹೊಂದಿದವರು ದಿನವೊಂದಕ್ಕೆ 1 ಲಕ್ಷದವರೆಗೆ ಹಣ ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಇನ್ನು ಎಸ್’ಬಿಐ ಖಾತೆ ಯಾರು ಹೊಂದಿರುತ್ತಾರೋ ಅವರೇ ಹಣ ಡ್ರಾ ಮಾಡಿಕೊಳ್ಳಬಹುದು. ಅಲ್ಲದೆ ಎಸ್.ಬಿ.ಐ.ನ ಈ ನಿಯಮದ ಪ್ರಕಾರ ದೇಶದ ಯಾವುದೇ ಶಾಖೆಯಲ್ಲಾದ್ರೂ ಹಣ ಡೆಪಾಸಿಟ್ ಮಾಡಬಹುದಾಗಿದೆ. ಇನ್ನು ಒಂದು ಅನುಕಲೂಲವೆಂದರೆ ಎಸ್.ಬಿ.ಐ. ಖಾತೆಯಲ್ಲಿ ಕನಿಷ್ಠ ಬಾಕಿಯನ್ನು ಉಳಿಸಿಕೊಂಡು ಎಟಿಎಂನಿಂದ ಎಷ್ಟು ಬೇಕಾದ್ರೂ ವಹಿವಾಟು ಮಾಡಬಹುದಾಗಿದೆ. ಎಸ್.ಬಿ.ಐ.ನ ಈ ನಿಯಮಗಳು ಗ್ರಾಹಕರಿಗೆ ಅನುಕೂಲವಾಗಲಿದೆ.
Comments