ಇನ್ನು ಮುಂದೆ 20 ರೂ. ನೋಟಿನ ಜೊತೆ ನಾಣ್ಯವೂ ಇರುತ್ತೆ..?ಹೇಗಿದೆ ಗೊತ್ತಾ ಹೊಸ ಕಾಯಿನ್..?!!!
ಇನ್ನು ಮುಂದೆ ಹೊಸ ನಾಣ್ಯಗಳು ಚಾಲ್ತಿಗೆ ಬರಲಿವೆ. ಅದರಲ್ಲೂ 20 ರೂಪಾಯಿ ನಾಣ್ಯಗಳು ಇನ್ನು ಮುಂದೆ ಚಾಲ್ತಿಯಲ್ಲಿರುತ್ತವೆ ಎಂದು ಹಣಕಾಸು ಸಚಿವಾಲಯ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಅಂದಹಾಗೇ 1 ರೂ, 2, 5 ರೂ ಅಂತೆ 20 ರೂಪಾಯಿ ನಾಣ್ಯಗಳು ಮುದ್ರಣವಾಗಲಿವೆ ಎಂದು ತಿಳಿಸಿದೆ. ಈಗಾಗಲೇ ಇರುವ 20 ರೂ. ನೋಟಿನ ಜೊತೆ 20 ರೂ, ನಾಣ್ಯವೂ ಸೇರ್ಪಡೆಯಾಗಲಿದೆ ಎಂಬ ಮಾಹಿತಿ ಇದೆ.
ಅಷ್ಟೇ ಅಲ್ಲದೇ ಹೊಸ ನಾಣ್ಯಗಳ ಜೊತೆ ಈಗಿರುವ 1 ರಿಂದ 10 ರೂ. ಗಳ ಎಲ್ಲಾ ನಾಣ್ಯಗಳ ವಿನ್ಯಾಸವನ್ನು ಬದಲಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ಹೊಸದಾಗಿ ಬರುತ್ತಿರುವ 20 ರೂ. ನಾಣ್ಯಗಳ ವಿನ್ಯಾಸ ಸ್ವಲ್ಪ ವಿಶಿಷ್ಟವಾಗಿದ್ದು ಸುಲಭವಾಗಿ ಗುರಿತಿಸಲು ಸಾಧ್ಯವಾಗಲಿದೆ. ಅಷ್ಟಭುಜಾಕೃತಿಯದ್ದಾಗಿರಲಿದ್ದು, ದೃಷ್ಟಿಹೀನರು ಕೂಡ ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ನಾಣ್ಯಗಳ ವಿನ್ಯಾಸ,ಆಕಾರದ ಬಗ್ಗೆ ಸಂಬಂಧಿತರಿಂದ ಮಾರ್ಗದರ್ಶನ, ಸಲಹೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಂತರ ನಾಣ್ಯದ ವಿನ್ಯಾಸವನ್ನು ಅಂತಿಮಗೊಳಿಸಲಾಗುವುದುಎಂದು ತಿಳಿಸಿದ್ದಾರೆ. ಮಾರ್ಚ್ 2018 ರವರೆಗೆ, ಭಾರತೀಯ ಮಾರುಕಟ್ಟೆಯಲ್ಲಿ ನಾಣ್ಯಗಳು 25,600 ಕೋಟಿ ರೂ. ಮೊತ್ತದ ನಾಣ್ಯಗಳು ಚಲಾವಣೆಯಲ್ಲಿದ್ದು, ಮಾರ್ಚ್ 2019 ರೊಳಗೆ 26,000 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದಹಾಗೇ ಈ ಹೊಸ ನಾಣ್ಯಗಳು ವಿಶೇಷವಾಗಿ ದೃಷ್ಟಿಹೀನರಿಗೆ ಸಹಾಯಕವಾಗಬಲ್ಲವು, ವಿನ್ಯಾಸ ನೋಡಿ ಎಷ್ಟು ಮೌಲ್ಯದ್ದು ಎಂಬುದನ್ನು ಗುರುತಿಸುವಂತೆ ಅನುವಾಗಲು ನಾಣ್ಯದ ವಿನ್ಯಾಸ ಮಾಡಲಾಗುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
Comments