ಕಡೆಗೂ ಪಕ್ಷ ಕನ್ಫರ್ಮ್ ಮಾಡಿದ ಹಾರ್ದಿಕ್ ಪಟೇಲ್ : ಮೂಹೂರ್ತ ಕೂಡ ಫಿಕ್ಸ್...?!!!

ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ಅವರು ಸದ್ಯ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಅವರ ರಾಜಕೀಯ ನಡೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದರೂ ಹಾರ್ದಿಕ್ ಪಟೇಲ್ ಯಾವ ರಾಜಕೀಯ ಪಕ್ಷ ಸೇರುತ್ತಾರೆ ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ಇತ್ತು.ನ್ಯಾಷನಲ್ ಪಾಟ್ರಿಯೊಂದಕ್ಕೆ ಸೇರಲು ಇದಕ್ಕೆ ಮೂಹೂರ್ತ ಕೂಡ ಫಿಕ್ಸ್ ಮಾಡಲಾಗಿದೆ. ಮಾರ್ಚ್ 12 ರಂದು ಹಾರ್ದಿಕ್ ಪಟೇಲ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಈ ಹಿಂದೆ ಕಾಂಗ್ರೆಸ್’ ಗೆ ಹಾರ್ದಿಕ್ ಪಟೇಲ್ ಅಂತಾ ಅನೇಕ ಸುದ್ದಿಗಳು ಹಬ್ಬಿದ್ರೂ, ಹಾರ್ದಿಕ್ ಪಟೇಲ್ ಮಾತ್ರ ಪ್ರತಿಕ್ರಿಯೆ ನೀಡ್ತಾ ಇರಲಿಲ್ಲ.
ಆದರೆ ಇದೀಗ ತಾನು ಅಧಿಕೃತವಾಗಿ ರಾಷ್ಟ್ರೀಯ ಪಾರ್ಟಿಯೊಂದಕ್ಕೆ ಸೇರಲಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಸೇರಲಿದ್ದಾರೆ. ಅಂದಹಾಗೇ ಪಕ್ಷ ಸೇರುತ್ತಿದ್ದಂತೇ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲಿದ್ದಾರೆ. ಗುಜರಾತಿನ ಜಾಮ್ನಗರ ಲೋಕಸಭಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇತ್ತೀಚೆಗಷ್ಟೇ ಸಪ್ತಪದಿ ತುಳಿದಿದ್ದ ಹಾರ್ದಿಕ್ ಅವರ ಜೀವನದ ರಾಜಕೀಯ ಹಾದಿ ಈ ಮೂಲಕ ಅಧಿಕೃತವಾಗಿ ಆರಂಭವಾಗಲಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅವರು ಮಾರ್ಚ್ 12 ರಂದು ಪಕ್ಷ ಸೇರಲಿದ್ದು, ಅವರ ಅಭಿಮಾನಿಗಳೂ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲಿದ್ದಾರೆ. ಅಂದಹಾಗೇ ಗುಜರಾತ್ ನಲ್ಲಿ ಬಿಜೆಪಿ ಸೋಲಿಸ ಬೇಕೆಂಬ ಹಠದಿಂದ ಕೆಲ ಕಂಡೀಷನ್ ಗಳ ಮೂಲಕ ಹಾರ್ದಿಕ್ ಪಕ್ಷ ಸೇರ್ತಾಯಿರೋ ಬಗ್ಗೆ ಕೂಡ ಸುದ್ದಿಯಾಗಿತ್ತು . ಸದ್ಯ ಕಾಂಗ್ರೆಸ್ ಕೈ ಹಿಡಿದಿರುವ ಹಾರ್ದಿಕ್ ಪಟೇಲ್ ಗೆ ಚುನಾವಣೆ ಲಕ್ ಕೊಡುತ್ತಾ..? ಕಾದು ನೋಡಬೇಕಿದೆ. ಅಂದಹಾಗೇ ಹಾರ್ದಿಕ್ ಪಟೇಲ್ ಅವರು ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಹೋರಾಟದ ಮೂಲಕ ಜನಪ್ರಿಯತೆ ಗಳಿಸಿದರು. ಅನೇಕ ಅಭಿಮಾನಿಗಳ ನೆಚ್ಚಿನ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಹಲವು ರಾಜಕೀಯ ಮುಖಂಡರು ಹಾರ್ದಿಕ್ ಅವರನ್ನು 'ಭವಿಷ್ಯದ ನಾಯಕ'ನೆಂದೂ ಕೂಡ ಕರೆದಿದ್ದಾರೆ.
Comments