'ಆಪರೇಷನ್ ಕಮಲ' ಸರ್ಜರಿ ಸಕ್ಸಸ್ : ಮೋದಿ ಸಮ್ಮುಖದಲ್ಲಿಯೇ ಕಾಂಗ್ರೆಸ್ ಶಾಸಕ ಬಿಜೆಪಿ ಸೇರ್ಪಡೆ !!!

ಇಂದು ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಭಾಷಣದುದ್ದಕ್ಕೂ ಮೋದಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರೈತರು ನಂಬಿ ದೋಸ್ತಿ ಸರ್ಕಾರಕ್ಕೆ ಆಡಳಿತ ನಡೆಸಲು ಕೊಟ್ಟರೇ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಖಾರವಾಗಿ ಮಾತನಾಡಿದ್ದರು. ಅಂದಹಾಗೇ ಕಲ್ಬುರ್ಗಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಅವರ ನೆಲೆ. ಅಲ್ಲಿಂದಲೇ ರಣ ಕಹಳೆ ಊದಲು ಮೋದಿ ಆರಂಭ ಮಾಡಿದಂತಿದೆ. ಲೋಕಸಭೆಗೆ ಅಖಾಡ ಸಿದ್ಧವಾಗಿದೆ. ಕಾಂಗ್ರೆಸ್ನಲ್ಲಿದ್ದ ಉಮೇಶ್ ಜಾಧವ್ ಮೋದಿ ನೇತೃತ್ವದಲ್ಲಿ ಅಧಿಕೃತವಾಗಿಯೇ ಇಂದು ಬಿಜೆಪಿ ಸೇರಿದ್ದಾರೆ. ಖರ್ಗೆ ನೆಲದಿಂದಲೇ ಮೋದಿ ಆಪರೇಷನ್ ಆರಂಭವಾಗಿದೆ. ಮೋದಿ ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರೇ ವಿನಹ ಎಲ್ಲಿಯೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ವಿರುದ್ಧ ಚಕಾರವೆತ್ತಲಿಲ್ಲ,ಈ ವಿಚಾರವಾಗಿ ಮೋದಿ ಏನಾದರು ಪ್ಲ್ಯಾನ್ ಮಾಡುತ್ತಿರಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಇದೇ ಮೊದಲ ಬಾರಿಗೆ ಡಾ. ಜಾಧವ್ ಅವರು ಪಕ್ಷಾಂತರ ಮಾಡಿದ ಮೇಲೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಕಲ್ಬುರ್ಗಿ ಜನರಲ್ಲಿ ವಿನಂತಿಸಿಕೊಳ್ಳುತ್ತೇನೆ,. ನನಗೂ ಒಂದು ಅವಕಾಶ ಕೊಡಿ ಮೋದಿ ಮತ್ತೊಮ್ಮೆ ಪ್ರಧಾನಿಯಾಬೇಕು. ನಿಮ್ಮೆಲ್ಲರ ಸಹಾಯ ಬೇಕು ಎಂದಿದ್ದಾರೆ. ಖರ್ಗೆ ನೆಲದಿಂದಲೇ ರಣ ಕಹಳೆ ಮೊಳಗಿಸಲು ಡಾ.ಜಾಧವ್ ಅವರನ್ನು ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮೋದಿ ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಳದೇ ಇದ್ರೂ ಪರೋಕ್ಷವಾಗಿ ಖರ್ಗೆ ನೆಲದಿಂದಲೇ ಆಪರೇಷನ್ ಕಮಲ ಸರ್ಜರಿ ಸಕ್ಸಸ್ ಆಗಿದೆ ಎನ್ನುತ್ತಿರುವುದಂತೂ ಸತ್ಯ. ಉಮೇಶ್ ಜಾಧವ್ ಬಿಜೆಪಿ ಸೇರಿದ ಮೇಲೆ ನನಗೆ ಬಹಳ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ. ನಿಮ್ಮ ಭರವಸೆಯ ಮೇಲೆ ಬಂದಿದ್ದೇನೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದ್ದಾರೆ.
ಮೋದಿ ಮಾತನಾಡುತ್ತಾ, ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಭರವಸೆ ನೀಡಲಾಗಿದ್ದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗಿಲ್ಲ. ರಾಜ್ಯದ ರೈತರಿಗೆ ದ್ರೋಹ ಬಗೆಯಲಾಗಿದೆ. ನಾವು ಕಳೆದ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ನಾವು ಈಡೇರಿಸಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಿಮಗೆ ಯಾರು ಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದು ಹೇಳಿದ್ದಾರೆ. ಒಂದು ಕಡೆ ಪ್ರಧಾನಿ ಹುದ್ದೆ ನಡುವೆ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಪೈಪೋಟಿ ಹೆಚ್ಚುತ್ತಿದ್ದರೇ ಇತ್ತ ಕಡೆ ರಾಜ್ಯದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೀಟು ಹಂಚಿಕೆ ಕಾವು ಕೂಡ ಜಾಸ್ತಿಯಾಗುತ್ತಿದೆ.
Comments