ಈ 9 ಜಿಲ್ಲೆಗಳಲ್ಲಿ ಸದ್ಯಕ್ಕೆ ಹೆಲ್ಮೆಟ್ ಬ್ಯಾನ್…!

ಈಗ ಬೇಸಿಗೆ ಎಷ್ಟಿದೆ ಅಂದರೆ… ಮನೆಯಿಂದ ಹೊರ ಬರಬೇಕಾದ್ರೆ ಒಂದು ಕ್ಷಣ ಯೋಚನೆ ಮಾಡಬೇಕು.. ಅಯ್ಯೋ ದೇವರೆ ಇಷ್ಟೊಂದು ಬಿಸಿಲಾ .. ಹೇಗಪ್ಪ ಕೆಲಸಕ್ಕೆ ಹೋಗೋದು ಅಂತಾ… ಟ್ರಾಫಿಕ್ ಕಿರಿ ಕಿರಿ ಇದ್ದರಂತೂ ಮುಗೀತು… ಟೂವೀಲರ್ಸ್ ಗೋಳು ಕೇಳೋರ್ಯಾರು ಎನ್ನುವ ರೀತಿ ಆಗೋಗಿ ಬಿಡುತ್ತದೆ… ಹೆಲ್ಮಟ್ ಹಾಕಿಕೊಳ್ಳುವುದಂತು ನರಕ ಹಿಂಸೆ ಅನಿಸಿಬಿಡುತ್ತದೆ… ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ… ಈ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನಿಡಲಾಗಿದೆ..
ಎಸ್… ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಲ್ಲ ಎಂದು ಸಂಚಾರ ಹಾಗೂ ಸುರಕ್ಷತೆಗೆ ಮಹಾನಿರ್ದೇಶಕರು ತಿಳಿಸಿದ್ದಾರೆ. ಈ ಕುರಿತು ಎಲ್ಲ ಜಿಲ್ಲೆಗಳ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. 9 ಜಿಲ್ಲೆಗಳಲ್ಲಿ ತಾಪಮಾನ 45 ರಿಂದ 46 ಡಿಗ್ರಿಯವರೆಗೆ ಏರುವ ನಿರೀಕ್ಷೆ ಇದೆ. ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ..ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಆರೋಗ್ಯದಲ್ಲಿಯೂ ಕೂಡ ಏರು ಪೇರಾಗುವ ಸಾಧ್ಯತೆ ಇರುತ್ತದೆ.. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಮಹಾನಿರ್ದೇಶಕರು ಬೇಸಿಗೆ ಮುಗಿಯುವವರೆಗೂ ಹೆಲ್ಮೆಟ್ ಹಾಕಿಕೊಳ್ಳುವುದರಲ್ಲಿ ವಿನಾಯಿತಿಯನ್ನು ನೀಡಲಾಗಿದೆ.
Comments