ಕೊನೆಗೂ ತಾಯ್ನಾಡು ತಲುಪಿದ ವಿಂಗ್ ಕಮಾಂಡರ್ ಅಭಿನಂದನ್ : ಮುಗಿಲು ಮುಟ್ಟಿದ ಭಾರತೀಯರ ಸಂಭ್ರಮ...!

ಕೊನೆಗೂ ಭಾರತೀಯ ವಾಯುಪಡೆಯ ಕಮಾಂಡರ್ ಅಭಿನಂದನ್ ವರ್ಧಮಾನ್ ಕೊನೆಗೆ ಭಾರತೀಯ ನೆಲವನ್ನು ಸ್ಪರ್ಶಿಸಿದ್ದಾರೆ. ಭಾರತೀಯರಿಗೆ ಇಂದು ಶುಭ ದಿನ. ಪೈಲೆಟ್ ಅಭಿನಂದನ್ ಸುರಕ್ಷಿತವಾಗಿ ಮರಳುವಂತೆ ಕೋಟ್ಯಾನು ಕೋಟಿ ಭಾರತೀಯರು ಪ್ರಾರ್ಥನೆ ಸಲ್ಲಿಸಿದ್ದೂ ಕೊನೆಗೆ ಫಲಿಸಿದೆ. ರಾಕ್ಷಸ ಪಾಕಿಗಳ ನೆಲದಲ್ಲಿ ಧೈರ್ಯವಾಗಿ ಸೆರೆಸಿಕ್ಕ ಅಭಿನಂದನ್ ವಾಪಸ್ ಬರುವುದರ ಬಗ್ಗೆ ಅನುಮಾನಗಳು ಮೂಡಿದ್ದವು. ಕೊನೆಗೂ ಭಾರತೀಯ ರಾಜತಾಂತ್ರಿಕ ಗೆಲುವೆಂದೇ ಇದನ್ನು ಹೇಳಬಹುದು. ನಿನ್ನೆ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಶಾಂತಿ ಸಂಕೇತವಾಗಿ ನಾವು ಅಭಿನಂದನ್ ಅವರನ್ನು ಕಳುಹಿಸುತ್ತೇವೆ ಎಂದು ಪ್ರಕಟಿಸುತ್ತಿದ್ದಂತೇ ಭಾರತೀಯರು ಕುಣಿದು ಕುಪ್ಪಳಿಸಿದ್ರು.
ವಾಘಾ ಗಡಿ ಮೂಲಕ ನಿಮ್ಮ ಸೇನೆ ಸೇರಲಿದ್ದಾರೆ ಅಭಿನಂದನ್ ಎಂದು ಪ್ರಕಟಿಸುತ್ತಿದ್ದಂತೇ ಭಾರತೀಯರ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ಅಭಿನಂದನ್ ಸ್ವಾಗತಕ್ಕೆ ಭಾರತೀಯರು ಬಕಪಕ್ಷಿಗಳಂತೇ ಕಾದು ಕುಳಿತಿದ್ದರು. ಯುದ್ಧದಿಂದ ಗೆಲುವು ಸಾಧಿಸಿ ಬಂದ ನಾಯಕನ ಆಲಿಂಗನಕ್ಕೆ ಕೋಟಿ ಕೋಟಿ ಕೈಗಳು ಕಾಯುತ್ತಿದ್ದವೂ, ಕೊನೆಗೂ ಪಾಪಿ ಪಾಕ್ ವೈರಿಗಳ ನೆಲದಿಂದ ಸಿಂಹದಂತೇ ಬಂದಿದ್ದಾರೆ ಅಭಿನಂದನ್. ಇಂದು ಸಂಜೆಯ ವೇಳೆಗೆ ಸುಮಾರು 4.50 ರ ವೇಳೆಗೆ ಅಭಿನಂದನ್ ಲಾಹೋರ್ ನಿಂದ ಸ್ವಲ್ಪ ದೂರದಲ್ಲಿರುವ ವಾಘಾ ಮೂಲಕವೇ ಬಂದಿದ್ದಾರೆ. ಭಾರತೀಯರಲ್ಲಿ ಸಂಭ್ರಮ, ಸಂತಸ ಮನೆ ಮಾಡಿದೆ. ಈಗಾಗಲೇ ವಾಘಾ ಗಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ. ಅವರನ್ನು ಕಾಣಲು ಜನಸಾಗರವೇ ಹರಿದು ಬರುತ್ತಿದೆ. ಭಾರತ-ಪಾಕಿಸ್ತಾನ ಗಡಿ ಪ್ರದೇಶವಾದ ವಾಘಾ ಮೂಲಕ ಅಭಿನಂದನ್ ಇಂದು ತಾಯ್ನೆಲವನ್ನು ಸ್ಪರ್ಶಿಸಲಿದ್ದು, ಈ ಪ್ರದೇಶದಲ್ಲಿ ನೆರೆದಿದ್ದ ಸಹಸ್ರಾರು ಭಾರತೀಯರು ಸಜ್ಜಾಗಿದ್ದರು. ಭಾರತದ ಧ್ವಜಗಳನ್ನು ಹಾರಾಡಿಸುತ್ತಾ, ಘೋಷಣೆಗಳನ್ನು ಕೂಗುವುದರ ಮೂಲಕ ಹರ್ಷವ್ಯಕ್ತ ಪಡಿಸುತ್ತಿದ್ದಾರೆ.
Comments