ಟೆನ್ನಿಸ್ ಸುಂದರಿ ಸಾನಿಯಾ ಪತಿಗೆ ಭಾರತೀಯರಿಂದ ಖಡಕ್ ವಾರ್ನಿಂಗ್ : ಟ್ವೀಟ್’ನಲ್ಲಿ ಆತ ಮಾಡಿದ್ದೇನು ಗೊತ್ತಾ..?

ಒಂದು ಕಡೆ ಟೆನ್ನಿಸ್ ಸುಂದರಿ ಸಾನಿಯಾ ಮಿರ್ಜಾ ಪುಲ್ವಾಮಾ ದಾಳಿ ಬಗ್ಗೆ ಮಾತನಾಡುವಾಗ, ನನ್ನನ್ಯಾಕೆ ಖಂಡಿಸುತ್ತೀರಾ..? ಪಾಕ್ ಸೊಸೆಯಾಗಿದ್ದಾ ತಪ್ಪಾ, ಪುಲ್ವಾಮಾ ದಾಳಿ ಬಗ್ಗೆ ನನಗೂ ಬೇಸರವಾಗಿದೆ ಎಂದು ಭಾರತೀಯರ ಪರವಾಗಿ ಮಾತನಾಡುತ್ತಿದ್ದರೇ ಇತ್ತ ಅವರ ಪತಿ ಪಾಕಿಸ್ತಾನದ ಆಟಗಾರ ಶೋಯೆಬ್ ಮಲ್ಲಿಕ್ ಅವರು ಭಾರತೀಯರ ವಿರುದ್ಧ ಟ್ವೀಟ್ ಮಾಡುವುದರ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಅದರಲ್ಲೂ ಹೈದರಬಾದಿನ ಸ್ಥಳೀಯರು ಶೋಯೆಬ್ ಮಲ್ಲಿಕ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಹೈದರಬಾದ್ ನಗರಕ್ಕೆ ಕಾಲಿಟ್ಟರೇ ಪರಿಣಾಮ ನೆಟ್ಟಗಿರಲ್ಲ, ಎಚ್ಚರಿಕೆಯಿಂದಿರಿ ಎಂದು ವಾರ್ನಿಂಗ್ ನೀಡಿದ್ದಾರೆ.
ಅಂದಹಾಗೇ ಶೋಯೆಬ್ ಮಲ್ಲಿಕ್ ಅವರು ಟ್ವೀಟ್ನಲ್ಲಿ ‘ಹಮಾರಾ ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೇ ಭಾರತೀಯರ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಯ್ತು. ಮತ್ತೆ ಕೆಲವರು ಈ ಟ್ವೀಟ್’ನ್ನು ಟ್ರೋಲ್ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸಾನಿಯಾ ಮಿರ್ಜಾ ಅವರೇ ನಿಮ್ಮ ಪತಿ ಮಾಡಿರುವ ಟ್ವೀಟ್ಗೆ ನೀವು ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ.ಇದರ ಬೆನ್ನಲ್ಲೇ ಬಿಜೆಪಿ ನಾಯಕ, ಶಾಸಕ ರಾಜಾ ಸಿಂಗ್ ಅಕ್ರೋಶ ವ್ಯಕ್ತಪಡಿಸಿ ತೆಲಂಗಾಣ ರಾಯಭಾರಿ ಸ್ಥಾನದಿಂದ ಸಾನಿಯಾ ಮಿರ್ಜಾರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.ಪಾಕಿಸ್ತಾನದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆ, ನಮ್ಮ ರಾಜ್ಯ ಬ್ರಾಂಡ್ ಅಂಬಾಸಿಡರ್ ಪತಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ. ಇದನ್ನು ಸಹಿಸುವುದು ಹೇಗೆ ಸಾಧ್ಯ. ಸಾನಿಯಾ ಮಿರ್ಜಾ ಅವರ ಬದಲಾಗಿ ತೆಲಂಗಾಣದ ರಾಜ್ಯದ ಸ್ಟಾರ್ ಕ್ರೀಡಾಪಟುಗಳಾದ ಪಿವಿ ಸಿಂಧು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಥವಾ ಸೈನಾ ನೆಹ್ವಾಲ್‍ರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಮಲಿಕ್ ಟ್ವೀಟ್ ಮಾಡಿ ಭಾರತಕ್ಕೆ ಅವಮಾನಿಸಿದ್ದಾರೆ. ಪತ್ನಿ ಬ್ರಾಂಡ್ ಅಂಬಾಸಿಡರ್ ಆಗಿದ್ದರೇ ಇತ್ತ, ಪತಿ ಭಾರತವನ್ನೇ ದ್ವೇಷಿಸುತ್ತಾನೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹಲವರು, ಮಲಿಕ್‍ಗೆ ಭಾರತಕ್ಕೆ ಬರಲು ಸಾಧ್ಯವಾಗದಂತೆ ಮಾಡಿ ಎಂದು ಸಿಎಂ ಕೆಸಿಆರ್ ಅವರಿಗೆ ಮನವಿ ಮಾಡಿದ್ದಾರೆ.
Comments