ನಮ್ಮ ಪೈಲೆಟ್’ನನ್ನು ಬಿಡೋಕೆ ಆ ಕಿಡಿಗೇಡಿ ಪಾಕ್ ರೆಡಿಯಂತೆ, ಆದರೆ ಕಂಡೀಷನ್ ಇದ್ಯಂತೆ : ಏನ್ ಗೊತ್ತಾ..?
ಭಾರತೀಯ ವಾಯುಸೇನೆ ಪೈಲೆಟ್ ಅಭಿನಂದನ್ ಸದ್ಯ ಪಾಕ್ ಕಪಿ ಮುಷ್ಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್ ಭಾರತಕ್ಕೆ ಕಳುಹಿಸಿ ಎಂದು ಭಾರತೀಯರು ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಶಾಂತಿ ಸಂಧಾನ ಮಾಡಿಕೊಳ್ಲೋಣ ಎಂದು ಹೇಳುತ್ತಿದ್ದರು ಅಭಿನಂದನ್ ಬಿಡೋಕೆ ಪಾಕ್ ಮೀನಾ- ಮೇಷ ಎಣಿಸುತ್ತಿದೆ.ಪಾಕ್ , ಭಾರತೀಯ ವಾಯುಪಡೆಯ ಅಭಿನಂದನ್ ವರ್ಧಮಾನ್ ಅವರನ್ನು ಬಿಡೋಕೆ ರೆಡಿಯಿದೆ. ಆದರೂ ಷರತ್ತುಬದ್ಧ ಬಿಡುವುದಾಗಿ ಒಪ್ಪಿಕೊಂಡಿದೆ.
ಅಂದಹಾಗೇ ಕೆಲ ಕಂಡೀಷನ್ಗಳ ಮೇಲೆ ಅಭಿನಂದನ್’ನನ್ನು ನಾವು ಬಿಡುತ್ತೇವೆ ಎಂದಿದ್ದಾರೆ.ಪಾಕ್, ಭಾರತಕ್ಕೆ ಗಡಿಯಿಂದ ನೀವು ನಿಮ್ಮ ಸೇನೆಯನ್ನು ವಾಪಸ್ ಕರೆಸಿಕೊಂಡರೇ ನಾವು ಅಭಿನಂದನ್ ಅವರ್ನನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮದ್ ಖುರೇಷಿ ಹೇಳಿದ್ದಾರೆ. ಆದರೆ ಪಾಕಿಗಳ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಭಾರತ, ನಾವು ಪಾಕಿಸ್ತಾನದ ಸೇನೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿಲ್ಲ, ಅಥವಾ ಆ ದೇಶದ ಜನರನ್ನು ಉದ್ದೇಶವಾಗಿಟ್ಟುಕೊಂಡು ನಾವು ದಾಳಿ ಮಾಡುತ್ತಿಲ್ಲ. ಈ ವಿಷಯದಲ್ಲಿ ನಾವು ಪಾಕಿಗಳ ಜೊತೆ ಋಆಜಿಯಾಗುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅಭಿನಂದನ್ ಅವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿದರೆ ನಿಮಗೆ ಒಳ್ಳೆಯದು, ಇಲ್ಲವೇ ಪರಿನಾಮ ನೆಟ್ಟಗಿರಲ್ಲ ಎಂದು ಭಾರತ ಪಾಕ್ ಗೆ ವಾರ್ನ್ ಮಾಡಿದ್ದಾರೆ.
Comments