ಭಾರತೀಯ ಪೈಲೆಟ್ ಬಿಡುಗಡೆಗೆ ಪಾಕಿಗಳಿಂದಲೇ ಆಗ್ರಹ…!!!
ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಈಗಿಂದೀಗಲೇ ಬಿಡುಗಡೆ ಮಾಡಿ ಎಂದು ಪಾಕಿಸ್ತಾನದವರಿಂದಲೇ ಮನವಿ ಬರುತ್ತಿವೆ. ಅವರನ್ನು ಸುರಕ್ಷಿತವಾಗಿ ವಾಪಸ್ ಭಾರತಕ್ಕೆ ಕಳುಹಿಸಿ ಎಂದು ಪಾಕ್'ನ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಮೊಮ್ಮಗಳು ಫಾತಿಮಾ ಭುಟ್ಟೋ ಮನವಿ ಮಾಡಿಕೊಂಡಿದ್ದಾರೆ. ಫಾತಿಮಾ ಮಾತನಾಡುತ್ತಾ ಪಾಕಿಸ್ತಾನ ಸರ್ವಾಧಿಕಾರ ಆಢಳಿತ, ಭಯೋತ್ಪಾದನೆ, ಅನಿಶ್ಚಿತತೆಗೆ ಕಳಂಕಕಕ್ಕೆ ಇತಿಹಾಸವೇ ಇದೆ. ಪಾಕಿಸ್ತಾನದ ಯುವ ಜನಾಂಗ ಇದನ್ನೆಲ್ಲಾ ಸಹಿಸಿಕೊಳ್ಳುವುದು ಕಷ್ಟ ಎಂದು ಭುಟ್ಟೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕ್ ಮಿಗ್ 21 ಯುದ್ಧ ವಿಮಾನವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ಸಂದರ್ಭದಲ್ಲಿ ಪೈಲೆಟ್ ಕೆಳಕ್ಕೆ ಹಾರಿದ್ದಾರೆ. ಅವರು ಗಡಿ ನಿಯಂತ್ರಣ ರೇಖೆಯೊಳಗೆ ಇಳಿದ ಪರಿಣಾಮ ಪಾಕಿಸ್ತಾನದ ಸೇನೆ ಅಭಿನಂದನ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಭಾರತ ಈಗಾಗಲೇ ಪೈಲೆಟ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕೆಂದು ಭಾರತ ಮನವಿ ಮಾಡಿಕೊಂಡಿದೆ, ಅಲ್ಲದೇ ಅಭಿನಂದನ್ ಗೆ ಯಾವ ಕಿರುಕುಳ ನೀಡಕೂಡದು, ಜಿನಿವಾ ಒಪ್ಪಂದದಂತೆ ಅವರನ್ನು ಸುರಕ್ಷಿತವಾಗಿಯೇ ಭಾರತಕ್ಕೆ ವಾಪಸ್ ಕಳುಹಿಸಬೇಕೆಂದು ತಾಕೀತು ಮಾಡಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪೈಲೆಟ್ ಅಭಿನಂದನ್ ಅವರು ಸುರಕ್ಷಿತವಾಗಿ ವಾಪಸ್ ಬರುವಂತೆ ಅಭಿಯಾನ ಆರಂಭ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ ಗೆ ಭಾರತೀಯ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ. ಒಂದು ವೇಳೆ ಪೈಲೆಟ್ ನನ್ನು ಬಿಡುಗಡೆ ಮಾಡದೇ ಇದ್ದರೇ, ಅಥವಾ ಅವರ ಜೀವಕ್ಕೆ ಕುತ್ತು ತಂದರೆ ಪರಿಣಾಮ ನೆಟ್ಟಗಿರಲ್ಲ ಎಂಬ ಸಂದೇಶಗಳು ರವಾನೆಯಾಗುತ್ತಿವೆ. ಈ ಬ್ಗಗೆ ಅಭಿನಂದನ್ ಅವರನ್ನು ಬಂಧಿಸಲ್ಪಟ್ಟ ವಿಡಿಯೋ ಕೂಡ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅಭಿನಂದನ್ ಆರೋಗಯವಾಗಿದ್ದಾರೆ, ಕಾಫಿ ಕುಡಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Comments