ನವಜೋತ್ ಸಿಂಗ್ ಸಿದ್ದು ಪರ 'ಬ್ಯಾಟ್' ಮಾಡಿದ್ದಕ್ಕೆ ನಟಿಗೆ ಶುರುವಾಯ್ತು ರೇಪ್ ಬೆದರಿಕೆ..!!

ಪೆಬ್ರವರಿ 14ರಂದು ಇಡೀ ದೇಶದಲ್ಲಿ ನೀರವ ಮೌನ ಆವರಿಸಿತು.. ಪುಲ್ವಾಮಾದಲ್ಲಿ ಸಿ.ಆರ್.ಪಿ.ಎಫ್. ಯೋಧರ ಮೇಲೆ ಉಗ್ರರ ದಾಳಿ ನಡೆದಾಗ ಇಡೀ ದೇಶ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿದ್ದು ಎಲ್ಲರಿಗೂ ಕೂಡ ಗೊತ್ತೆ ಇದೆ.. ಆದರೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದ್ದು ಪಾಕಿಸ್ತಾನದ ಪರ ಬ್ಯಾಟ್ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಿದ್ದು ಪರ ಸಾಕಷ್ಟು ವಿರೋಧದ ಧನಿಗಳು ಕೇಳಿಬಂದಿದ್ದವು… ಇದೀಗ ಸಿದ್ದು ಪರ ನಟಿ ಶಿಲ್ಪಾ ಸಿಂಧೆ ಕೂಡ ಮಾತನಾಡಿದ್ದಾರೆ. ಈ ರೀತಿ ಮಾತನಾಡಿದ ನಟಿ ಶಿಲ್ಪಾ ಸಿಂಧೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಬರಲು ಪ್ರಾರಂಭವಾಗಿವೆಯಂತೆ..
ಸೋಷಿಯಲ್ ಮಿಡೀಯಾದಲ್ಲಿ ಹೆಚ್ಚು ಫಾಲೋವರ್ಸ್‌ನ್ನು ಹೊಂದಿರುವ ನಟಿ ಶಿಲ್ಪಾ, ಹಿಂದಿಯ ಬಿಗ್ ಬಾಸ್ 11ರ ವಿನ್ನರ್ ಕೂಡ ಆಗಿದ್ದರು.. ಸಿದ್ದು ಪಾಕಿಸ್ತಾನದ ಪರವಾಗಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾದಾಗ ಶಿಲ್ಪಾ, ಸಿದ್ದು ಅವರದ್ದು ತಪ್ಪಿಲ್ಲ ಎಂದು ಹೇಳಿದ್ದರು. ಇದೀಗ ಶಿಲ್ಪಾ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಟ್ರೋಲ್‌ಗಳು ಪ್ರಾರಂಭವಾಗಿದ್ದು , ಕೆಲವರು ನಟಿಗೆ ರೇಪ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.
ಈ ವಿಷಯವಾಗಿ ಮಾತನಾಡಿರುವ ನಟಿ ಶಿಲ್ಪಾ ಸಿಂಧೆ ಈ ರೀತಿಯ ಬೆದರಿಕೆಗಳು ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತ. ಸಿದ್ದು ಅವರೆಂದು ಉಗ್ರರ ಬಗ್ಗೆ ಮಾತನಾಡಿಲ್ಲ. ಉಗ್ರವಾದ ಕೆಟ್ಟದ್ದು ಎಂದು ಅವರಿಗೂ ಗೊತ್ತಿದೆ. ಉಗ್ರರ ವಿರುದ್ಧ ಹೋರಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ಈ ವಿಷಯದ ಬಗ್ಗೆ ಸರಿಯಾಗಿ ಚರ್ಚೆಯಾಗಲಿ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಸ್ವಾತಂತ್ರ್ಯ ಭಾರತದಲ್ಲಿರುವ ನಮಗೆ ನಮ್ಮ ಅಭಿಪ್ರಾಯವನ್ನು ತಿಳಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಸಿದ್ದು ಪರ ಮಾತನಾಡಿದ ಶಿಲ್ಪ ಸಿಂಧೆ ಕೂಡ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..
Comments