ಫ್ಲೈಟ್ ಮಿಸ್ ಆಗುತ್ತೆ ಅಂತಾ ಆ ವ್ಯಕ್ತಿ ಮಾಡಿದ್ದೇನು ಗೊತ್ತಾ..?

ನಮ್ ಜನ ಹೇಗ್ ಇರ್ತಾರೆ ಅಂದ್ರೆ ಅವರು ಮಾಡೋ ಕೆಲಸಕ್ಕೆ ನಗಬೇಕೋ ಅಳಬೇಕೋ ಒಂದು ಗೊತ್ತಾಗಲ್ಲ…ಇಲ್ಲೊಬ್ಬ ಮಹಾಶಯ ಮಾಡಿರೋ ಕೆಲಸಕ್ಕೆ ಏನ್ ಹೇಳ್ಬೇಕು ಅಂತಾನೇ ಗೊತ್ತಾಗ್ತಿಲ್ಲ… ಫ್ಲೈಟ್ ಮಿಸ್ ಆಗುತ್ತೆ ಅಂತ ಈತ ಏನ್ ಮಾಡಿದ್ದಾನೆ ಗೊತ್ತಾ..? ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ತಾಕೋರೆ ಪ್ರತೀಕ್ ಎಂಬುವವರು ಹುಸಿ ಬಾಂಬ್ ಕರೆ ಮಾಡಿದ್ದಾರೆ. ಗುಜರಾತ್ ಮೂಲದ ತಾಕೋರೆ ಪ್ರತೀಕ್ ತನ್ನ ಪತ್ನಿ ಹಾಗೂ ಮಗನ ಜೊತೆ ಸಂಬಂಧಿಕರ ಮದುವೆಗೆ ಬೆಂಗಳೂರಿಗೆ ಆಗಮಿಸಿದ್ದರು…ಸೋಮವಾರ ಸಂಜೆ ಮದುವೆ ಮುಗಿಸಿ ಮುಂಬೈಗೆ ವಾಪಸ್ಸಾಗೋಕೆ ಮೂವರಿಗೆ ಸಂಜೆ 7.10ರ ಬೆಂಗಳೂರು ಮುಂಬೈ ಏರ್ ಇಂಡಿಯಾ 601 ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಈ ವೇಳೆ ನಿಗದಿತ ಸಮಯಕ್ಕೆ ಏರ್ ಪೋರ್ಟ್ ಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತೀಕ್, ಕೆಐಎಲ್ ಅಧಿಕಾರಿಗಳ ನಂಬರಿಗೆ ಕರೆ ಮಾಡಿ ಏರ್ ಇಂಡಿಯಾ 601 ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಕೆಐಎಎಲ್ ಹಾಗೂ ಸಿಎಐಎಸ್‌ಎಫ್ ಅಧಿಕಾರಿಗಳು ವಿಮಾನ ತಪಾಸಣೆ ನಡೆಸಿದ್ದಾರೆ. ಬಳಿಕ ಟ್ರೇಸ್ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ತಾಕೋರೆ ಪ್ರತೀಕ್ ವಿರುದ್ಧ ಕೆಎಐಎಲ್ ಆಡಳಿತಮಂಡಳಿ ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಏನೋ ಮಾಡುವುದಕ್ಕೆ ಹೋಗಿ ಏನೋ ಆಯಿತಂತೆ ಅನ್ನೊ ಆಗೆ ಆಯಿತು ಈ ವ್ಯಕ್ತಿಯ ಕಥೆ..
Comments