ಬಂಡೀಪುರ ಅಭಯಾರಣ್ಯ ಹೊತ್ತಿ ಉರಿಯೋಕೆ ಇದೇ ಕಾರಣವಂತೆ : ಕೇಳಿದ್ರೆ ಶಾಕ್ ಆಗ್ತೀರಾ...?!!!

ಅಂದಹಾಗೇ ಮೂರು ದಿನಗಳ ಹಿಂದೆ ಬಂಡೀಪುರ ಅಭಯಾರಣ್ಯ ದಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡು ನೋಡುತ್ತಿದ್ದಂತೇ ವನ್ಯ ಜೀವಿಗಳು ಸುಟ್ಟು ಭಸ್ಮವಾದವು. ಕಾಡಿನಲ್ಲಿ ಪ್ರಾಣಿ-ಪಕ್ಷಿಗಳು ಜೀವ ಭಯದಿಂದ ಎತ್ತೆಂದರತ್ತ ದಿಕ್ಕೆಟ್ಟು ಓಡುತ್ತಿವೆ. ಬಂಡೀಪುರದಲ್ಲಿ ಕಾಡ್ಗಿಚ್ಚು ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದರು, ನಿರ್ದಿಷ್ಟವಾದ ಕಾರಣ ಗೊತ್ತಿಲ್ಲ. ಹಲವು ಅನುಮಾನಗಳು ಮೂಡುತ್ತಿವೆ, ಅಗ್ನಿ ದುರಂತದ ಹಿಂದೆ ಯಾರದ್ದೋ ಕಿಡಿಗೇಡಿಗಳ ಕೈವಾಡವಿದೆ ಎಂಬುದು ಸದ್ಯಕ್ಕಿರುವ ಮಾಹಿತಿಯಷ್ಟೆ. ದಿನದಿಂದ ದಿನಕ್ಕೆ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಹೆಚ್ಚಾಗುತ್ತಿದೆ. ಈಗಾಗಲೇ ಅದನ್ನು ನಿಯಂತ್ರಿಸೋಕೆ ಹರಸಾಹಸ ಪಡುತ್ತಿದ್ದರೂ ಸಹಜ ಸ್ಥಿತಿಗೆ ಬರುತ್ತಿಲ್ಲ. ಈ ಮಧ್ಯೆ ಮತ್ತೊಂದು ಅನುಮಾನ ಮೂಡಿದೆ.
ಬಂಡೀಪುರ ಕಾಡಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಸಂಶಯ ಮೂಡಿದ ಬೆನ್ನಲ್ಲೇ ಮತ್ತೊಂದು ಸಾಕ್ಷಿ ಸಿಕ್ಕಿದೆ. ಬಂಡೀಪುರ ಅಗ್ನಿದುರಂತದಿಂದ ಸಹಜವಾಗೇ ಜನರು ಬೆಚ್ಚಿಬಿದ್ದಿದ್ದಾರೆ. ಮೂಲಗಳ ಪ್ರಕಾರ, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಹಲವು ವಿಚಾರಗಳ ಕುರಿತು ಸಂಘರ್ಷ ನಡೆಯುತ್ತಿದೆ. ಒಣಗಿದ ಆನೆಯ ಲದ್ದಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂಬ ಶಂಕೆಗಳು ವ್ಯಕ್ತವಾಗುತ್ತಿವೆ.ಅಂದಹಾಗೇ ಒಣಗಿದ ಆನೆಯ ಲದ್ದಿಗೆ ಬೆಂಕಿ ಹಾಕಿದರೇ ಅದು ಧೂಪ ಉರಿದಂತೆ ಉರಿಯುತ್ತದೆ. ಸುದೀರ್ಘವಾಗಿ ಉರಿಯುವ ಈ ಉರಿಯಿಂದ ಗಾಳಿ ಬೀಸಿದ ಕಡೆಗೆಲ್ಲಾ ಕಿಡಿ ಹಾರುತ್ತದೆ. ಆ ಕಿಡಿಯಿಂದ್ಲೇ ಅಭಯಾರಣ್ಯಗೆ ಅಲ್ಲಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ. 11 ಸಾವಿರ ಎಕೆರೆಗೂ ಹೆಚ್ಚು ಅರಣ್ಯ ದಹನವಾಗಿದೆ ಎನ್ನಲಾಗ್ತಿದೆ. ಅಂದಹಾಗೇ ಅರಣ್ಯ ಇಲಾಖಾ ಅಧಿಕಾರಿಗಳು ಈ ಘಟನೆಗೆ ಏನು ಕಾರಣ ಎಂಬುದನ್ನು ಅರಿಯಲು ತನಿಖೆ ಶುರು ಮಾಡಿದ್ದಾರೆ. ಈ ತನಿಖಾ ವೇಳೆ ಈ ಅನುಮಾನ ವ್ಯಕ್ತವಾಗಿದೆ. ಆನೆ ಲದ್ದಿಗೆ ಬೆಂಕಿ ಹಾಕಿರುವುದಕ್ಕೆ ಕೆಲ ಸಾಕ್ಷಿಗಳು ಕೂಡ ಸಿಕ್ಕಿವೆ. ಈ ಹಿನ್ನಲೆಯಲ್ಲಿ ಮತ್ತಷ್ಟು ತನಿಕಾ ಕಾರ್ಯ ಚುರುಕುಗೊಳಿಸಿದ್ದಾರೆ ಅಧಿಕಾರಿಗಳು.
Comments