ಪುಲ್ವಾಮಾ ದಾಳಿಗೆ ಸೇಡು ತೀರಿಸಿಕೊಂಡ ಭಾರತ : 300 ಪಾಕ್ ಉಗ್ರರು ಉಡೀಸ್...!
ಫೆ. 14, ಭಾರತಕ್ಕೆ ಅಂದು ಕರಾಳ ದಿನ. ನಮ್ಮ ಗಡಿ ಕಾಯೋ ಅನೇಕ ಯೋಧರ ದೇಹ ಛಿದ್ರ ಛಿದ್ರವಾಗಿತ್ತು. ಪುಲ್ವಾಮಾ ದಲ್ಲಿ ಭಾರತೀಯ ಯೋಧರ ರಕ್ತದ ಕೋಡಿ ಹರಿದಿತ್ತು. ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಬಾಂಬ್ ಸ್ಫೋಟಿಸಿ ಅಮಾಯಕ ಯೋಧರ ನೆತ್ತರು ಹರಿಸಿದರು ಆ ಪಾಕಿ ಉಗ್ರರು. ಆ ಘಟನೆಗೆ ಇಡೀ ಭಾರತವೇ ಶೋಕ ಸಾಗರದಲ್ಲಿ ಮುಳುಗಿ ಹೋಯ್ತು. ತಮ್ಮ ಕುಟುಂಬದ ಸದಸ್ಯನನ್ನೇ ಕಳೆದುಕೊಂಡಾಗೇ ಭಾರತೀಯರು ರೋಧಿಸಿದರು. ಮಕ್ಕಳೆನ್ನದೇ ಎಲ್ಲಾ ವಯಸ್ಸಿನವರು ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು, ನಮ್ಮ ರಕ್ತ ಕುದಿಯುತ್ತಿದೆ, ನಮ್ಮವರನ್ನ ಕಳೆದುಕೊಂಡು ನಾವು ಅನಾಥರಾಗಿದ್ದೇವೆಂಬ ಸಂದೇಶದ ಮೂಲಕ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡರು.
ಇದಕ್ಕೆ ಪ್ರಧಾನಿ ಮೋದಿ ಕೂಡ, ನಮಗೂ ದುಃಖವಾಗಿದೆ, ಈ ಘಟನೆಗೆ ಪ್ರತೀಕಾರವನ್ನು ಹೇಗೆ ತೀರಿಸಿಕೊಳ್ಳಬೇಕು ಎಂಬ ತೀರ್ಮಾನವನ್ನು ನಾವು ನಮ್ಮ ಯೋಧರಿಗೆ ಬಿಟ್ಟಿದ್ದೇವೆ ಎಂದರು. ಮುಯ್ಯಿಗೆ ಮುಯ್ಯಿ ಎಂಬಂತೆ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ಜೈಷ್-ಇ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಗೆ 300ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಭಾರತ ನಡೆಸಿದ ಅತೀ ದೊಡ್ಡ ದಾಳಿ ಇದಾಗಿದೆ. ಪಾಕ್ ನವರು ಆಕ್ರಮಿಸಿಕೊಂಡಿರುವ (ಕಾಶ್ಮೀರ) ಎಲ್ ಒಸಿಯಲ್ಲಿ ಭಾರತೀಯ ಸೇನೆ ಉಗ್ರರ ಮೇಲೆ ನಡೆಸಿದ ಎರಡನೇ ದಾಳಿ ಇದಾಗಿದೆ. ಈ ದಾಳಿಯಲ್ಲಿ 300 ಪಾಕ್ ಉಗ್ರರು ಸಾವನಪ್ಪಿದ್ದಾರೆ. ಮುಜಾಫರ್‍ಬಾದ್‍ನ ಮೂರು ಜೈಷ್-ಇ-ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ಇಂದು ಮುಂಜಾನೆ 3.30ಕ್ಕೆ ಎರಗಿದ ಮಿರಾಜ್ 12 ಯುದ್ಧ ವಿಮಾನಗಳು ದೇಶದ್ರೋಹಿಗಳನ್ನು ಸದೆ ಬಡಿದಿದ್ದಾರೆ. ಜೈಷ್ ಹೋ ಸಂಘಟನೆಯ ಶಿಬಿರಗಳು ಸದ್ಯ ಸರ್ವನಾಶವಾಗಿವೆ. ಭಾರತೀಯ ಯೋಧರ ವಾಯು ದಾಳಿಗೆ ಎಲಲ್‍ಒಸಿ ಬಳಿಯ ಬಾಲ್ಕೋಟ್, ಖೈಬರ್ ಪಖ್ತೂಲ್ವಾ ಸೇರಿದಂತೆ ಒಟ್ಟು ಮೂರು ಉಗ್ರರ ನೆಲೆಗಳು ವಾಯುದಾಳಿಗೆ ಸಂಪೂರ್ಣವಾಗಿ ನಾಶವಾಗಿವೆ.
ಅಂದಹಾಗೇ ಜೈಷ್ ಹೋ ಉಗ್ರ ಸಂಘಟನೆಗೆ ಬಾಲ್ಕೋಟ್ ಸ್ವರ್ಗ ಎಂದೇ ಹೇಳಲಾಗುತ್ತಿತ್ತು. ಅಲ್ಲಿನ 6 ರಿಂದ 10 ಎಕರೆ ಜಮೀನು ಸಂಪೂರ್ಣವಾಗಿ ನಾಶವಾಗಿದೆ. ಭಾರತದ ವಾಯುಸೇನೆ ನಡೆಸಿರುವ ದಾಳಿ ಕುರಿತು ಖುದ್ದು ಪಾಕಿಸ್ತಾನ ಸರ್ಕಾರವೇ ಕೆಲವು ವಿಡಿಯೋ ಫುಟೇಜ್‍ಗಳನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಈ ಬಾರಿ ಪಾಕ್ ಜೊತೆ ಸಂಧಾನಕ್ಕೆ ನಾವು ಸಿದ್ಧರಿಲ್ಲ, ನಮ್ಮ ಯೋಧರ ಶ್ರಮ ವ್ಯರ್ಥವಾಗಲು ನಾವು ಬಿಡೋದಿಲ್ಲ. ನಮ್ಮ ತಾಳ್ಮೆಯನ್ನು ನೀವು ದೌರ್ಬಲ್ಯವೆಂದು ತಿಳಿದರೇ ಖಂಡಿತಾ ನಾವು ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದರು. ಅದರಂತೇ ಇಂದು ಸೇಡು ತೀರಿಸಿಕೊಳ್ಳಲಾಗಿದೆ. ಇನ್ನು ನಿನ್ನೆಯಷ್ಟೇ ಪಾಕ್ ಪ್ರಧಾನಿ ಇಮ್ರಾನ್‍ಖಾನ್ ಭಾರತದ ಎಚ್ಚರಿಕೆಗೆ ಬೆದರಿ ಶಾಂತಿ ಸ್ಥಾಪನೆಗೆ ಒಂದೇ ಒಂದು ಅವಕಾಶ ಕೊಡಿ ಎಂದು ಗೋಗರೆದಿದ್ದರು. ಗುಪ್ತಚರ ವಿಭಾಗದ ಖಚಿತ ಮಾಹಿತಿ ಆಧಾರದ ಮೇಲೆ ಮಿರಾಜ್-2000 ಹಾಗೂ ಸುಖೋಯ್ 12 ಯುದ್ಧ ವಿಮಾನಗಳು ಕೇವಲ 20 ನಿಮಿಷಗಳಲ್ಲಿ ಇಡೀ ಕಾರ್ಯಾಚರಣೆಯನ್ನು ಮುಗಿಸಿ ಪಾಕ್ ಉಗ್ರರಿಗೆ ನರಕ ತೋರಿಸಿವೆ.
Comments