ಯಲಹಂಕ ವಾಯುನೆಲೆಯಲ್ಲಿ ಬೆಂಕಿ ಅವಘಡ..!!

ಯಲಹಂಕ ನಡೆಯುತ್ತಿರುವ ವಾಯುನೆಲೆಯಲ್ಲಿ ಏರೋ ಇಂಡಿಯಾ ಕ ಪ್ರದರ್ಶನದ ಸಮಯದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ವೈಮಾನಿಕ ಪ್ರದರ್ಶನ ಉದ್ಘಾಟನೆಗೂ ಮುನ್ನಾ ದಿನ ತಾಲೀಮು ನಡೆಸುವ ವೇಳೆ ಸೂರ್ಯ-ಕಿರಣ ಎಂಬ ಎರಡು ವಿಮಾನಗಳು ಹಾರಾಡುತ್ತಿದ್ದಾಗಲೇ ಪರಸ್ಪರ ಡಿಕ್ಕಿಯಾಗಿ ಘಟನೆಯಲ್ಲಿ ಓರ್ವ ಪೈಲೆಟ್ ಸಾವನ್ನಪ್ಪಿದ ಘಟನೆ ಮೊನ್ನೆಯಷ್ಟೆ ನಡಿದಿತ್ತು.. ಆದರೆ ಇಂದು ಮತ್ತೊಂದು ಘಟನೆ ಸಂಭವಿಸಿದೆ.
ಇಂದು ಭಾರೀ ಅಗ್ನಿ ಅವಘಡ ಸಂಭವಿಸಿ ಸುಮಾರು 50ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ.ವಾಯುನೆಲೆಯ ಏರ್‍ಶೋ ನಡೆಯುತ್ತಿರುವ ರಸ್ತೆಯ ಗೇಟ್ ನಂ.5ರ ಬಳಿ ಕಾಣಿಸಿಕೊಂಡ ಬೆಂಕಿ ರೌದ್ರಾವತಾರ ತಾಳಿ ಕಾರು ಮತ್ತು ಬೈಕ್‍ಗಳಿಗೆ ಹೊತ್ತಿಕೊಂಡಿದೆ. ಸುಮಾರು 50 ಕಾರುಗಳು, ಹಲವು ಬೈಕ್‍ಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ. ಯಲಹಂಕ ಮೈದಾನದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಈಗಾಗಲೇ 10ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳಲ್ಲಿ ತೆರಳಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.
Comments