ನಟ ನಟಿಯರು ಮಾರಾಟಕ್ಕೆ ಇದ್ದಾರೆ..!! ಯಾರಿಗೆ ಯಾವ ನಟ ನಟಿ ಬೇಕು…?
ನಮ್ಮ ದೇಶದ ರಾಜಕೀಯ ಎಷ್ಟರ ಮಟ್ಟಿಗೆ ಹದಗೆಡುತ್ತಿದೆ ಎನ್ನುವುದಕ್ಕೆ ಕೆಲವೊಂದು ನಿದರ್ಶನಗಳು ನಮ್ಮ ಕಣ್ಣಮುಂದೆಯೆ ಕಾಣಿಸುತ್ತವೆ.. ಇದೀಗ ಆ ರೀತಿಯ ನಿದರ್ಶನ ನಮ್ಮ ಕಣ್ಣ ಮುಂದಿದೆ.. ಇದೀಗ ರಾಜಕೀಯ ಪಕ್ಷಗಳಿಂದ ಅಪಾರ ಮೊತ್ತದ ಹಣವನ್ನು ಪಡೆದು ಆ ಪಕ್ಷಗಳ ಪರವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಚುನಾವಣಾ ಪ್ರಚಾರಾಭಿಯಾನ ಕೈಗೊಳ್ಳುವ ಡೀಲ್ ಗೆ 30ಕ್ಕೂ ಅಧಿಕ ಭಾರತೀಯ ಸಿನೆಮಾ ಮತ್ತು ಟಿವಿ ನಟ-ನಟಿಯರು ಒಪ್ಪಿಕೊಂಡಿರುವುದು ಇದೀಗ ಕುಟುಕು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.
ರಾಜಕೀಯ ಪಕ್ಷಗಳು ತೆರಿಗೆ ಒಳಪಡದಂತೆ ನಗದು ರೂಪದಲ್ಲಿ ತಮಗೆ ಹಣ ಪಾವತಿಸಬೇಕು ಎಂದು ಈ ನಟ-ನಟಿಯರು ಕೇಳಿಕೊಂಡಿದ್ದು ಈ ಮೂಲಕ ಅವರ ಈ ಅಕ್ರಮ ಸಂಭಾವನೆ ಕಾಳಧನವಾಗಲಿದೆ.ಈ ರೀತಿಯ ಒಪ್ಪಂದವನ್ನು ರಾಜಕೀಯ ಪಕ್ಷಗಳೊಂದಿಗೆ ಮಾಡಿಕೊಂಡಿರುವ ಮತ್ತು ಕುಟುಕು ಕಾರ್ಯಾಚರಣೆಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ನಟ-ನಟಿಯರೆಂದರೆ ವಿವೇಕ್ ಒಬೆರಾಯ್, ಶಕ್ತಿ ಕಪೂರ್, ಜಾಕಿ ಶ್ರಾಫ್, ಆಮಿಷಾ ಪಟೇಲ್, ಮಹಿಮಾ ಚೌಧರಿ ಮತ್ತು ಸೋನು ಸೂದ್; ಗಾಯಕರ ಪೈಕಿ ಕೈಲಾಶ್ ಖೇರ್, ಅಭಿಜಿತ್ ಮತ್ತು ಮಿಕಾ ಅವರ ಹೆಸರು ಕೂಡ ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ.. ಸುದ್ದಿ ವೆಬ್ ಸೈಟ್ ಕೋಬ್ರಾ ಪೋಸ್ಟ್ ಕಳೆದ ವರ್ಷ ಮೂರು - ನಾಲ್ಕು ತಿಂಗಳ ಅವಧಿಯಲ್ಲಿ ನಡೆಸಿದ್ದ ಕ್ಯಾಮೆರಾ ಕುಟುಕು ಕಾರ್ಯಾಚರಣೆಯಲ್ಲಿ ಈ ನಟ-ನಟಿಯರು ಕ್ಯಾಶ್ ಫಾರ್ ಟ್ವೀಟ್ ಕೊಡುಗೆಯನ್ನು ಸ್ವೀಕರಿಸಿರುವುದು ದಾಖಲಾಗಿದೆ. ಕೋಬ್ರಾ ಪೋಸ್ಟ್ ಕಳೆದ ಮಂಗಳವಾರ ಬಿಡುಗಡೆ ಮಾಡಿದ್ದ 'ಆಪರೇಶನ್ ಕರೋಕೆ' ಶೀರ್ಷಿಕೆಯ ಕುಟುಕು ಕಾರ್ಯಾಚರಣೆಯ ವಿಡಿಯೋ ಡಾಕ್ಯುಮೆಂಟರಿ ಇದೀಗ ರಾಜಕೀಯ ವಲಯಗಳಲ್ಲಿ ಸಿಕ್ಕಾಪಟ್ಟೆ ಸಂಚಲನ ಉಂಟುಮಾಡಿದೆ. ರಾಜಕೀಯದ ಹಣಕ್ಕಾಗಿ ತಮ್ಮ ತಮ್ಮನ್ನೆ ಮಾರಾಟ ಮಾಡಿಕೊಳ್ಳುತ್ತಿರುವು ಬೇಸರದ ಸಂಗತಿ…
Comments