ರಮ್ಯಾ ನಿಮಗೆ ನೀವು ಕನ್ನಡದವರು ಅನ್ನೊದು ನೆನಪಿದ್ಯಾ…!!! ನೆಟ್ಟಿಗರು ಹೀಗೆ ಪ್ರಶ್ನೆ ಮಾಡಿದ್ಯಾಕೆ..?
ಸ್ಯಾಂಡಲ್ ವುಡ್ ಪದ್ಮಾವತಿ ಏನ್ ಮಾಡಿದ್ರು ತಪ್ಪೆ ಎನ್ನುವ ರೀತಿ ಆಗಿಬಿಟ್ಟಿದೆ… ಸುಮ್ಮನಿದ್ದರೂ ಕಷ್ಟ… ಏನ್ ಮಾಡುದ್ರು ಕಷ್ಟ.. ಅದರಲ್ಲೂ ಮಂಡ್ಯ ಜನತೆ ಮಾತ್ರ ರಮ್ಯಳನ್ನು ಕಂಡರೆ ಕೆಂಡಾಮಂಡಲವಾಗುತ್ತಿದ್ದಾರೆ. ಅನಾರೋಗ್ದ ನೆನವೊಡ್ಡಿ ಅಂಬರೀಶ್ ಅವರನ್ನು ನೋಡಲು ಬಂದಿಲ್ಲ.. ಈ ರೀತಿಯ ಒಂದಿಷ್ಟು ಕೆಲಸಗಳಿಗೆ ರಮ್ಯ ಪದೇ ಪದೇ ಸುದ್ದಿಯಾಗುತ್ತಿದ್ದಾರೆ.. ಸಾಮಾಜಿಕ ಜಾಲತಾಣಗಳ ಮೂಲಕವು ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು… ಇದೀಗ ಮತ್ತೆ ನೆಟ್ಟಿಗರ ಕೈಗೆ ತಗುಲಿಹಾಕಿಕೊಂಡಿದ್ದಾರೆ.. ಮಾತೃಭಾಷಾ ದಿನದ ಪ್ರಯುಕ್ತ ಟ್ವಿಟರ್ ನಲ್ಲಿ ಕನ್ನಡದ ಬಗ್ಗೆ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿದ್ದಕ್ಕೆ ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಮತ್ತೆ ಟ್ರೋಲ್’ಗೊಳಗಾಗಿದ್ದಾರೆ.
ಕನ್ನಡೇತರ ಮಂದಿ ಕರ್ನಾಟಕ ಮತ್ತು ಕನ್ನಡ ಎಂಬ ಶಬ್ಧವನ್ನು ಹೇಗೆ ತಪ್ಪಾಗಿ ಉಚ್ಛರಿಸುತ್ತಾರೆ ಎಂದು ರಮ್ಯಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ವಿವರಣೆ ನೀಡಿದ್ದರು.ಇದನ್ನು ನೋಡಿ ಟ್ವಿಟರಿಗರು ಕನ್ನಡದ ಬಗ್ಗೆಯಾದರೂ ಕನ್ನಡದಲ್ಲೇ ಟೈಪ್ ಮಾಡಿ ಎಂದಿದ್ದಾರೆ. ಮತ್ತೆ ಕೆಲವರು ಸದ್ಯ, ನಿಮಗೆ ನೀವು ಕನ್ನಡದವರು ಎಂಬುದು ನೆನಪಿದೆಯಲ್ಲಾ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಮೊದಲು ರಾಹುಲ್ ಗಾಂಧಿಗೆ ವಿಶ್ವೇಶ್ವರಯ್ಯ ಎಂದು ಹೇಗೆ ಸರಿಯಾಗಿ ಉಚ್ಛರಿಸಬೇಕು ಎಂದು ಕಲಿಸಿಕೊಡಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಂತೂ ಇತ್ತೀಚೆಗೆ ರಮ್ಯಾ ಏನೇ ಟ್ವೀಟ್ ಮಾಡಿದರೂ ಟ್ರೋಲ್ ಗೊಳಗಾಗುವುದು ಮಾತ್ರ ತಪ್ಪುವುದಿಲ್ಲ. ರಮ್ಯಾ ಮಾಡೋ ಕೆಸ ಬಿಡಲ್ಲ ಹಾಗೆ ಸುದ್ದಿಯಾಗೋದು ಕಡಮೆ ಆಗಲ್ಲ…
Comments