ನಾನು ಯುದ್ಧಕ್ಕೆ ರೆಡಿಯಾಗಿದ್ದೇನೆ ಎಂದು ಸೂಚನೆ ಕೊಟ್ಟ ಕಿಡಿಗೇಡಿ ಪಾಕ್…!

ಪಾಕ್-ಇಂಡಿಯಾ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪುಲ್ವಾಮಾ ದಾಳಿಯಿಂದಾಗಿ ಮತ್ತಷ್ಟು ಪ್ರತೀಕಾರದ ಕೂಗು ಕೇಳಿ ಬರುತ್ತಿದೆ. ಈಗಾಗಲೇ ಭಾರತ ಉಗ್ರ ಸಂಘಟನೆಗೆ ಪಾಠ ಕಲಿಸಿದ್ದರೂ , ಪಾಕ್ ಬುದ್ಧಿ ಕಲಿತ್ತಂತಿಲ್ಲ. ಭಾರತ, ಪುಲ್ವಾಮಾ ದಾಳಿಯ ನಂತರ ಯಾವಾಗ ಬೇಕಾದರೂ ಯುದ್ಧ ಸಾರಬಹುದು ಎಂಬ ಭೀತಿಯಿಂದ ಪಾಕಿಸ್ತಾನ ಈಗಾಗಲೇ ಯುದ್ಧವನ್ನು ಎದುರಿಸಲು ಸನ್ನದ್ಧವಾಗಿದೆ ಎಂಬ ಕ್ಲ್ಯೂ ಸಿಕ್ಕಿದೆ.
"ಭಾರತದೊಂದಿಗೆ ಯುದ್ಧವಾಗುವ ಸಂಭವವಿರುವುದರಿಂದ ಎಲ್ಲರೀತಿಯ ವೈದ್ಯಕೀಯ ನೆರವು ನೀಡುವಂತೆ" ಕ್ವೆಟ್ಟಾದಲ್ಲಿರುವ ಪಾಕಿಸ್ತಾನ ಸೇನಾ ನೆಲೆಯ ಕೇಂದ್ರದಿಂದ ಪಾಕ್ ನ ಜಿಲಾನಿ ಆಸ್ಪತ್ರೆಗೆ ಪತ್ರ ಬರೆಯಲಾಗಿದೆ. ಯುದ್ಧದ ಸನ್ನಿವೇಶ ಇರುವುದರಿಂದ ಯಾವ ಸಮಯದಲ್ಲಿ ಯುದ್ಧವಾಗಬಹುದು. ಸಂಘರ್ಷದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಈಗಲೇ ಸಿದ್ಧರಾಗಿ. ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್ ಗಳನ್ನು ವ್ಯವಸ್ಥೆ ಮಾಡಿ" ಎಂದು ಪತ್ರದಲ್ಲಿ ಬರೆಯಲಾಗಿದೆ. ಫೆ. 14 ರಂದು ನಡೆದ ಪುಲ್ವಾಮಾದಲ್ಲಿ ಉಗ್ರ ಸಂಚಿನಿಂದ ನಮ್ಮವರ ಮೇಲೆ ದಾಳಿ ನಡೆಸಿ 44 ಅಮಾಯಕ ಯೋಧರು ನೆತ್ತರು ಹರಿಸಿದ್ದರು. ಈ ಹೇಯಕೃತ್ಯದ ವಿರುದ್ಧ ಪ್ರತೀಕಾರ,ತೀರಿಸಿಕೊಳ್ಳಲು ಮತ್ತು, ಭಯೋತ್ಪಾದನೆಯ ವಿರುದ್ಧ ಸಮರ ಸಾರಲು ಸಿದ್ಧವಾಗಿರುವ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬಹುದು ಎಂಬ ವದಂತಿ ಹಬ್ಬಿದೆ. ಇದು ಪಾಕ್ ವಲಯದಲ್ಲಿ ಭೀತಿ ಮೂಡಿಸಿದೆ.
Comments