ಆ ಪುಟ್ಟ ಬಾಲಕಿ ಮೋದಿಗೆ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ…?
ಪುಟ್ಟ ಬಾಲಕಿಯೊಬ್ಬಳು, ಪ್ರಧಾನಿಗೆ ಪತ್ರವೊಂದನ್ನು ಬರೆದಿದ್ದಾಳೆ. ಆ ಮುಗ್ಧ ಬಾಲಕಿಯ ಮನಸ್ಸಲ್ಲಿ ಇರುವ ಆಕ್ರೋಶವನ್ನು ಅಕ್ಷರ ರೂಪದಲ್ಲಿ ಇಳಿಸಿದ್ದಾಳೆ. ಮೋದಿಗೆ ಸಲಹೆ ಕೊಡುವುದರ ಮೂಲಕ ನಾವಿದ್ದೇವೆ ನಿಮ್ಮೊಂದಿಗೆ ಎಂದಿದ್ದಾಳೆ. ಮೋದಿ ಕುರಿತಾಗಿ ಒಂದಷ್ಟು ಸಾಲುಗಳನ್ನು ಬರೆದಿದ್ದಾಳೆ. ತನ್ನ ಮನಸ್ಸಲ್ಲಿರುವ ಪ್ರತೀಕಾರದ ಜ್ವಾಲೆಗೆ ನೀವು ಉತ್ತರ ಕೊಡುತ್ತೀರಿ ಅದಕ್ಕಾಗಿ ನಾನು ಕಾಯುತ್ತಿದ್ದೀನಿ ಎಂದು ಹೇಳಿದ್ದಾಳೆ. ಈ ಪತ್ರದ ಮೂಲಕ ಮಕ್ಕಳ ಮನಸ್ಸಲ್ಲೂ ಉಗ್ರವಾದ, ಪಾಕ್ ಮೇಲಿನ ಎಂತಹ ರೋಷ ಹುಟ್ಟಿದೆ ಎಂಬುದನ್ನು ಇದೊಂದು ಉತ್ತಮ ನಿದರ್ಶನವಾಗಿದೆ.
ಪುಲ್ವಾಮ ದಾಳಿಯಿಂದಾಗಿ ಅನೇಕ ಭಾರತೀಯರ ರಕ್ತ ಕುದಿಯುತ್ತದೆ. ಪ್ರತೀಕಾರದ ಸೇಡು ತೀರಿಸಿಕೊಳ್ಳಲು ಮಕ್ಕಳೆನ್ನದೇ, ಮುದುಕರವರೆಗೂ ಪಾಕ್ ಮೇಲೆ ಸೇಡು ತೀರಿಸಿಕೊಳ್ಳುವಂತೆ ಮಾಡಿದೆ. ಭಾರತೀಯರ ಯೋಧರ ಸಾವಿಗೆ ಕಾರಣವಾದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳೋಣ. ಅಂಥ ಪಾಪಿಗಳನ್ನು ಕೊಲ್ಲುವುದು ಖಂಡಿತ ಪಾಪವಲ್ಲ. ನನಗೆ ಗೊತ್ತು ಮೋದಿ ಅಂಕಲ್, ನೀವು ಏನೇ ಮಾಡಿದ್ರೂ ಒಳ್ಳೆಯದನ್ನೇ ಮಾಡುತ್ತೀರಿ. ಆದ್ದರಿಂದ ಆ ಉಗ್ರರಿಗೂ ನೀವು ಪಾಠ ಕಲಿಸುತ್ತೀರಿ ಎಂಬ ನಂಬಿಕೆ ನಮಗಿದೆ' ಎಂದು ಮನಾಲಿ ಎಂಬ ಪುಟ್ಟ ಬಾಲಕಿ ಪತ್ರ ಬರೆದಿದ್ದಾಳೆ.
ಈ ಪತ್ರ ಹಿಂದಿ ಭಾಷೆಯಲ್ಲಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ಫೆಬ್ರವರಿ 14 ರಂದು ಜೈಷ್ ಇ ಮೊಹಮ್ಮದ್ ಉಗ್ರರು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ್ದರು. ಆ ದಾಳಿಯಿಂದಾಗಿ 44 ಯೋಧರು ರಕ್ತ ಸರಿಸಿದ್ರು. ನಮ್ಮವರು ಯಾವ ತಪ್ಪು ಇಲ್ಲದೇ ಹುತಾತ್ಮರಾದರು. ಆ ಸುದ್ದಿ ಹೊರಬಿದ್ದಾಗ ನಾನು ಹೋಂವರ್ಕ್ ಮಾಡುತ್ತಿದ್ದೆ. ಯೋಧರ ಬಲಿದಾನದ ಸುದ್ದಿ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿತು' ಎಂದು ಮನಾಲಿ ಹೇಳಿಕೊಂಡಿದ್ದಾಳೆ.
Comments