ಏಷ್ಯಾದ ಅತೀ ದೊಡ್ಡ ಏರ್ ಷೋ ಗೆ ಇಂದಿನಿಂದ ವಿದ್ಯುಕ್ತ ಚಾಲನೆ...

ಇಂದಿನಿಂದ ಏಷ್ಯಾದ ಅತೀ ದೊಡ್ಡ ಪ್ರತಿಷ್ಠಿತ ಏರೋ ಇಂಡಿಯಾ 2109 ನೇ 12 ನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಅಂದಹಾಗೇ ನಿನ್ನೆ ನಡೆದ ಅವಘಡದಿಂದಾಗಿ ಇಂದು ನಡೆಯಬೇಕಿದ್ದ ಏರ್ ಷೋ ಬಗ್ಗೆ ಒಂದಷ್ಟು ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಸದ್ಯ ಅದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ರಕ್ಷಣಾ ಸಚಿವೆನಿರ್ಮಲಾ ಸೀತಾರಾಮನ್ ಅವರು 'ಇಂಡಿಯನ್ ಏರೋಸ್ಪೇಸ್ ಟೇಕಿಂಗ್ ಆಫ್' ಪುಸ್ತಕ ಬಿಡುಗಡೆ ಮಾಡುವುದರ ಮೂಲಕ ಏರೋ ಇಂಡಿಯಾಗೆ ಚಾಲನೆ ನೀಡಿದ್ದಾರೆ.
ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಹೆಚ್‌ಎಎಲ್, ಡಿಆರ್ ಡಿಒ , ದೇಶದ ಮೂರು ಸೇನಾ ಪಡೆಗಳು ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ. ಈ ಏರ್ ಶೋ ನಲ್ಲಿ ಸುಮಾರು 30 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ.
30 ಕ್ಕೂ ಹೆಚ್ಚು ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ರಕ್ಷಣಾ ವಲಯ ಮತ್ತು ನಾಗರೀಕ ವಿಮಾನಯಾನ ವಲಯ ಹಾಗೂ ಮಿಲಿಟರಿ ಕ್ಷೇತ್ರದ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿವೆ. ಫೆ. 20 ರಿಂದ 24 ರ ವರೆಗೆ ಐದು ದಿನಗಳ ಕಾಲ ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5.30 ರ ವರೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಈಗಾಗಲೇ ಯಲಹಂಕ ಸುತ್ತಮುತ್ತಲು ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಸುಮಾರು 8 ಕಿ.ಮೀ ತನಕವೂ ವಾಹನಗಳು ಸಾಲುಗಟ್ಟಿ ನಿಂತಿವೆ.
Comments