ಗೆದ್ದ ಸ್ವರ್ಣ ಪದಕವನ್ನೇ ಹುತಾತ್ಮ ಯೋಧರಿಗೆ ಅರ್ಪಿಸಿ ಅಭಿಮಾನ ಮೆರೆದ ಆಟಗಾರ…?!!

ಪುಲ್ವಾಮಾ ದಾಳಿಯಿಂದ ವೀರ ಯೋಧರ ನೆತ್ತರು ಹರಿದಿದೆ. ಪಾಕ್ ಮತ್ತು ಭಾರತದ ನಡುವೆ ಹಣಾಹಣಿ ಆರಂಭವಾಗಿದೆ. ಗಡಿ ಕಾಯೋ ಸೈನಿಕರ ರಕ್ತ ಕುದಿಯುವಂತೆ ಮಾಡಿದ್ದು ಪುಲ್ವಾಮಾ ಭೀಕರ ದಾಳಿ. ನಮ್ಮ ಸೈನಿಕರ ದೇಹ ಛಿದ್ರ ಛಿದ್ರವಾಗುವಂತೆ ಮಾಡಿದ್ದು ಉಗ್ರರ ಕ್ರೂರತನ. ಹುತಾತ್ಮ ಯೋಧರಿಗೆ ಇಡೀ ದೇಶವೇ ಕಂಬನಿ ಮಿಡಿಯಿತು. ವೀರ ಮರಣ ಹೊಂದಿದ ಸೈನಿಕರಿಗೆ ಸಹಾಯ ಮಾಡಲು, ದೇಶದ ಜನ ಒಗ್ಗಟ್ಟಾಗಿದ್ದಾರೆ.
ನೆರವು ನೀಡಲು ಮುಂದೆ ಬರುತ್ತಿದ್ದಾರೆ. ಇದೀಗ ತಾನು ವರ್ಷಗಳಿಂದ ಕಂಡ ಕನಸು-ನನಸನ್ನೇ ಧಾರೆ ಎಳೆದಿದ್ದಾನೆ ಇಲ್ಲೊಬ್ಬ ಅಂತರಾಷ್ಟ್ರೀಯ ಆಟಗಾರ. ಐವಾಸ್ ಅಂತಾರಾಷ್ಟ್ರೀಯ ಕ್ರೀಡಾಕೂಟದ ಹೈಜಂಪ್‌ನಲ್ಲಿ ಕರ್ನಾಟಕದ ಪ್ಯಾರಾ ಅಥ್ಲೀಟ್ ಗಿರೀಶ್ ಚಿನ್ನದ ಪದಕ ಜಯಿಸಿದ್ದಾರೆ. ಈ ಚಿನ್ನದ ಪದಕವನ್ನು ಪುಲ್ವಾಮ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಅರ್ಪಿಸಿದ್ದಾರೆ. ಈ ವರ್ಷದಲ್ಲಿ ಗಿರೀಶ್ ಗೆದ್ದ ಮೊದಲ ಪದಕವಿದು. 2012ರ ಲಂಡನ್ ಪ್ಯಾರಾ ಒಲಿಂಪಿಕ್ ನ ಹೈ ಜಂಪ್ ವಿಭಾಗದಲ್ಲಿ74 ಮೀ ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ವಿಜೇತರಾಗಿದ್ದ ಗಿರೀಶ್ ಗೆ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ 2014ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪಾಕ್-ಇಂಡಿಯಾಗಳ ಹಣಾಹಣಿಯಲ್ಲಿ ಈಗಾಗಲೇ ಅನೇಕ ಉಗ್ರರು ನೆಲ ಕಚ್ಚಿದ್ದಾರೆ. ಮುಗ್ಧ ಯೋಧರ ಬಲಿ ತೆಗೆದುಕೊಂಡ ಉಗ್ರ ಸಂಘಟನೆಯನ್ನು ಮಟ್ಟ ಹಾಕಲು ಭಾರತದ ಸೈನಿಕರು ಟೊಂಕ ಕಟ್ಟಿ ನಿಂತಿದ್ದಾರೆ. ಪ್ರತೀಕಾರದ ಜ್ವಾಲೆ ಗಡಿ ಭಾಗದಲ್ಲಿ ಹೆಚ್ಚಾಗುತ್ತಿದೆ.
Comments