'ಸಾನಿಯಾ ಪಾಕ್ ಸೊಸೆಯಾಗಿದ್ದೇ ತಪ್ಪಾ' : ಆಕೆಯನ್ನು ಕಿತ್ತೆಸೆಯಿರಿ ಎಂದ ಬಿಜೆಪಿ ಶಾಸಕ…!!

ಅಂದ ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಸಾನಿಯಾ ಬಗ್ಗೆ ವ್ಯಾಪಕ ಖಂಡನೆ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಾನಿಯಾ ದೇಶಪ್ರೇಮ ನನಗೂ ಇದೆ. ಉಗ್ರರ ದಾಳಿಯಿಂದ ನನಗೂ ತೀವ್ರ ನೋವಾಗಿದೆ. ಆದರೆ ಕೆಲವರು ನನ್ನನ್ನು ಗುರಿಯಾಗಿಸಿದ್ದಾರೆ. ಯಾಕ್ಹೀಗೆ..,? ನಾನು ಹೇಗೆ ಕಾರಣವಾಗ್ತೀನಿ ಎಂದು ಹೇಳಿದ್ದಾರೆ. ಅಂದಹಾಗೇ ಸಾನಿಯಾ ಮದುವೆಯಾಗಿರುವುದು ಪಾಕ್ ನ ಶೋಯೆಬ್ ಮಲ್ಲಿಕ್ ಅವರನ್ನು ಹಾಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಖಂಡನೆ ವ್ಯಕ್ತವಾಗುತ್ತಿದೆ.
ಅದಲ್ಲದೇ ತೆಲಂಗಾಣ ರಾಯಭಾರಿಯಾಗಿರುವ ಸಾನಿಯಾ ಅವರು ಮುಂದುವರೆಯುವುದು ಬೇಡ ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಆಗ್ರಹಿಸಿದ್ದಾರೆ. ಪುಲ್ವಾಮ ದಾಳಿ ಬಳಿಕ ಶಾಸಕ ರಾಜಾ ಸಿಂಗ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಾನಿಯಾ ಮಿರ್ಜಾ, ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ ಮದುವೆಯಾದ ಬಳಿಕ ಪಾಕಿಸ್ತಾನ ಸೊಸೆಯಾಗಿದ್ದಾರೆ. ಹೀಗಾಗಿ ತೆಲಂಗಾಣ ರಾಯಭಾರಿಯಾಗಿ ಮುಂದುವರಿಸುವುದು ಸೂಕ್ತವಲ್ಲ ಎಂದಿದ್ದಾರೆ.ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾನಿಯಾ ಭಾರತದ ಪರ ಆಡುತ್ತಿದ್ದರೂ, ಪಾಕಿಸ್ತಾನಿ ಸೊಸೆಯಾಗಿದ್ದಾರೆ.
ಹೀಗಾಗಿ ಪಾಕ್ ಜೊತೆಗಿನ ಯಾವುದೇ ವ್ಯವಹಾರ ಭಾರತಕ್ಕೆ ಬೇಡ. ಹೀಗಾಗಿ ರಾಯಭಾರಿ ಸ್ಥಾನದಿಂದ ಸಾನಿಯಾರನ್ನು ತೆಗೆದುಹಾಕಿ ಎಂದಿದ್ದಾರೆ.ಪುಲ್ವಾಮ ದಾಳಿ ಪಾಕ್ ಪ್ರಚೋದಿತ, ಆದರೂ ಸಾನಿಯಾ ಪ್ರತಿಕ್ರಿಯೆ ನೀಡಿರಲಿಲ್ಲ. ಯಾವಾಗ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಯ್ತೋ ಆ ನಂತರ ಸಾನಿಯಾ ಕೂಡ ಮಾತನಾಡಿದ್ದರು. ಇದೀಗ ಬಿಜೆಪಿ ಶಾಸಕನ ಮಾತಿನಿಂದ ಮತ್ತಷ್ಟು ಚಚರ್ಚೆಗಳು ನಡೆಯುತ್ತಿವೆ. ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ದಾಳಿ ಬಳಿಕ ಪಾಕಿಸ್ತಾನಕ್ಕೆ ಎಲ್ಲಾ ರೀತಿಯ ಹೊಡೆತ ನೀಡಲು ಭಾರತ ಮುಂದಾಗಿದೆ. ಈಗಾಗಲೇ ಪಾಕ್ ಆರ್ಟಿಸ್ಟ್'ಗಳು ಬಿ ಟೌನ್ ನಲ್ಲಿ ನಟಿಸೋದನ್ನು ನಿಷೇಧ ಮಾಡಲಾಗಿದೆ. ಈಗಾಗಲೇ ಉಗ್ರರ ಅಟ್ಟಹಾಸವನ್ನು ಇಳಿಸಲು ಭಾರತ ಈಗಾಗಲೇ ಕಾರ್ಯ ಆರಂಭಿಸಿದೆ.
Comments