ಛಿದ್ರವಾದ ವೀರ ಯೋಧರ ದೇಹದ ಭಾಗಗಳನ್ನು ಕಂಡು ಹಿಡಿದಿದ್ದು ಹೇಗೆ ಗೊತ್ತಾ..…?

ಮೊನ್ನೆ ಮೊನ್ನೆಯಷ್ಟೆ ಇಡೀ ದೇಶವೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದೆ ಹೋಗಿದೆ.. ದೇಶಬೆಚ್ಚಿ ಬೀಳಿಸಿದ ಪುಲ್ವಾಮ ಉಗ್ರದಾಳಿ ನಿಜಕ್ಕೂ ಇಡೀ ದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.. ಯೋಧರನ್ನು ಕಳೆದುಕೊಂಡು ನೋವಿನಲ್ಲಿದ್ದವರಿಗೆ ದೊಡ್ಡ ಸವಾಲೊಂದು ಎದುರಾಗಿತ್ತು ಎನ್ನಬಹುದು... ಛಿದ್ರವಾದಂತಹ ಯೋಧರ ದೇಹದ ಭಾಗಗಳನ್ನು ಕಂಡು ಹಿಡಿಯಬಹುದು ಬಹಳ ಕಷ್ಟವಾಗಿತ್ತು.... ಒಂದೊಂದು ದಿಕ್ಕಿನಲ್ಲಿಯೂ ಕೂಡ ದೇಹದ ತುಂಡುಗಳು ಬಿದ್ದಿದ್ದವು.. ಯಾರ ಗುರುತು ಕೂಡ ಪತ್ತೆ ಆಗದಂತಹ ಭೀಕರ ದೃಶ್ಯ ಅದಾಗಿತ್ತು... ಅದೆಲ್ಲದರ ನಡುವೆ ದೇಹಗಳನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿತ್ತು.. ಇಂತಹ ಸಮಯದಲ್ಲಿ ಕೆಲವು ಯೋಧರ ಜೇಬಿನಲ್ಲಿದ್ದ ಆಧಾರ್ ಕಾರ್ಡ್ ನಿಂದ ಕೆಲವರನ್ನು ಪತ್ತೆ ಹಚ್ಚಲಾಯಿತಂತೆ....
ಇನ್ನೂ ಕೆಲವು ಯೋಧರು ಊರಿಗೆ ಹೋಗಲು ರಜೆ ಚೀಟಿ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದರು.. ಅದನ್ನು ನೋಡಿ ಅವರ ಗುರುತುಗಳನ್ನು ಪತ್ತೆ ಮಾಡಲಾಯಿತು.. ಇನ್ನೂ ಕೆಲವರನ್ನು ಜೇಬಿನಲ್ಲಿದ್ದ ಪಾನ್ ಕಾರ್ಡ್ ಮೂಲಕ ಪತ್ತೆ ಹಚ್ಚಲಾಯಿತು.. ಆದರೂ ಮೀರಿ ಯಾವ ಗುರುತು ಸಿಗದಿದ್ದಾಗ, ಅತ್ಯಂತ ನೋವಿನ ಸಂಗತಿ ಎಂದರೆ.. ಚೆಲ್ಲಾ ಪಿಲ್ಲಿಯಾಗಿದ್ದ ಕೈಗಳಲ್ಲಿ ಕಟ್ಟಿದ್ದಂತಹ ವಾಚ್’ಗಳನ್ನು ನೋಡಿ ಇತರೆ ಯೋಧರು ತಮ್ಮ ತಮ್ಮ ಸ್ನೇಹಿತರನ್ನು ಗುರುತಿಸಿದ್ದಾರೆ.. ಶತ್ರುಗಳಿಗೂ ಈ ರೀತಿಯ ಸ್ಥಿತಿ ಬರಬಾರದು ಎಂದುಕೊಳ್ಳುವ ಭಾರತೀಯರು ನಾವು. ಆದರೆ ನಮ್ಮ ಯೋಧರನ್ನೇ ಇಂತಹ ಸ್ಥಿತಿಯಲ್ಲಿ ನೋಡಬೇಕಾದ ದೌರ್ಭಾಗ್ಯ ನಮ್ಮದಾಗಿದೆ ಎನ್ನುವುದೇ ವಿಪರ್ಯಾಸ… ನಮ್ಮ ಯೋಧರ ಪ್ರತಿ ಹನಿ ರಕ್ತಕ್ಕೂ ಉಗ್ರರು ಬೆಲೆ ಕಟ್ಟಬೇಕಾಗುತ್ತದೆ.. ದೇಶಕ್ಕಾಗಿ ವೀರ ಮರಣವನ್ನು ಅಪ್ಪಿರುವ ವೀರ ಯೋಧರಿಗೆ ನಮ್ಮದೊಂದು ಸಲಾಂ..
Comments