ಉಗ್ರರ ದಾಳಿ ಖಂಡಿಸಿ ಫೆ 19ಕ್ಕೆ 'ಕರ್ನಾಟಕ ಬಂದ್'..!!
ಕಳೆದ ಮೂರು ದಿನಗಳ ಹಿಂದಷ್ಟೆ ಪುಲ್ವಾಮ ಉಗ್ರರ ದಾಳಿಯಲ್ಲಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ…ಪುಲ್ವಾಮ ಉಗ್ರರ ದಾಳಿ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಫೆ. 19 ರಂದು ಕರ್ನಾಟಕ ಬಂದ್ ಮಾಡುವುದಾಗಿ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.ನಿನ್ನೆ ಭಾರತೀಯರಿಗೆ ಕರಾಳ ದಿನ. ಇಡೀ ದೇಶವೇ ಕಣ್ಣೀರು ಸುರಿಸುತ್ತಿದೆ. ಪುಲ್ವಾಮದಲ್ಲಿ ಸಂಭವಿಸಿದ ಭೀಕರ ಉಗ್ರ ದಾಳಿಯಲ್ಲಿ ವೀರ ಯೋಧರು ಪ್ರಾಣ ತೆತ್ತಿದ್ದಾರೆ. ಹುತಾತ್ಮರಾದ ಯೋಧರಲ್ಲಿ ಮಂಡ್ಯದ ಯುವಕ ಗುರು ಕೂಡ ಒಬ್ಬರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ಯೋಧರ ಸಾವಿನಿಂದ ಭಾರತವೇ ಕಣ್ಣೀರುಡುತ್ತಿದೆ. ಭಾರತ ಸರ್ಕಾರಕ್ಕೆ ಇದೊಂದು ಚಾಲೆಂಜ್ ಆಗಿದೆ. ನಾವು ಮನಸು ಮಾಡಿದರೆ ಉಗ್ರ ಸಂಘಟನೆಯನ್ನು ಪುಡಿ ಮಾಡುವ ಶಕ್ತಿ ಇದೆ. 49 ಯೋಧರ ಪ್ರಾಣ ಕಳೆದುಕೊಂಡಿದ್ದಾರೆ. ಇಂಟೆಲಿಜೆನ್ಸ್ ಏನಾಗಿದೆ. ವಾಹನ ಬಂದು ಡಿಕ್ಕಿ ಹೊಡೆದರೂ ಯಾಕೆ ನೋಡ್ಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.ಆರು ಕೋಟಿ ಕನ್ನಡಿಗರು ಉಗ್ರರ ವಿರುದ್ದ ಪ್ರತೀಕಾರಕ್ಕಾಗಿ ಕಾಯುತ್ತಾ ಇದ್ದಾರೆ. ಪಕ್ಷ ಭೇದ ಮರೆತು ಎಲ್ಲಾ ಪಕ್ಷಗಳು ಒಂದಾಗಿವೆ. ಈ ಕೃತ್ಯ ಖಂಡಿಸಿ ಭಯೋತ್ಪಾದನೆ ಇರಬಾರದು ಎಂದು ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ..
Comments