ದಾಖಲೆ ಕೇಳದೇ ಯೋಧನ ಕುಟುಂಬಕ್ಕೆ ದಿಢೀರ್ ಹಣ ನೀಡಿ ಮಾನವೀಯತೆ ಮೆರೆದ LIC....
ನಿನ್ನೆ ಭಾರತೀಯರಿಗೆ ಕರಾಳ ದಿನ. ಇಡೀ ದೇಶವೇ ಕಣ್ಣೀರು ಸುರಿಸುತ್ತಿದೆ. ಪುಲ್ವಾಮದಲ್ಲಿ ಸಂಭವಿಸಿದ ಭೀಕರ ಉಗ್ರ ದಾಳಿಯಲ್ಲಿ ವೀರ ಯೋಧರು ಪ್ರಾಣ ತೆತ್ತಿದ್ದಾರೆ. ಹುತಾತ್ಮರಾದ ಯೋಧರಲ್ಲಿ ಮಂಡ್ಯದ ಯುವಕ ಗುರು ಕೂಡ ಒಬ್ಬರು. ಭಾರತೀಯ ಜೀವಾ ವಿಮಾ ಕಂಪನಿ LIC ಯೋಧ ಗುರು ಅವರ ಕುಟುಂಬಕ್ಕೆ ತಕ್ಷಣ ತನ್ನ ನೆರವಿನ ಹಸ್ತ ಚಾಚಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ LIC ವಿಮೆ ಮರಣದಾವೆ ಹಣ ತಲುಪಿಸಿ ಮಾನವೀಯತೆ ಮೆರೆದಿದೆ.
ಮರಣ ಹೊಂದಿದ ವ್ಯಕ್ತಿ ಕುಟುಂಬಕ್ಕೆ ಎಲ್ಐಸಿ ಯಿಂದ ಹಣ ಸಿಗಬೇಕಾದರೇ ಸಾಕಷ್ಟು ಸರ್ಕಸ್ ನಡೆಸಬೇಕಾಗಿತ್ತು . ಆದರೆ ದೇಶ ಕಾಯೋ ಯೋಧ ಗುರು ಸಾವಿನ ಸುದ್ದಿ ಇಡೀ ರಾಷ್ಟ್ರದ್ಯಂತ ಕಾಳ್ಗಿಚ್ಚಿನಂತೇ ಹಬ್ಬಿದೆ. ಸ್ವಂತ ಮನೆ, ಜಮೀನು ಇಲ್ಲದೇ ಬಡತನದಲ್ಲಿ ನೊಂದು ಬೆಂದ ಯೋಧ ಗುರು ಮದುವೆಯಾದ 8 ತಿಂಗಳಿಗೆ ಮರಣ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಕಂಪನಿ ಯಾವುದೇ ದಾಖಲೆಯನ್ನೂ ಕೇಳದೆ ಯೋಧನ ಕುಟುಂಬಕ್ಕೆ ಹಣ ನೀಡಿದೆ. ಪಾಲಿಸಿ ನಂ 725974544ನಲ್ಲಿ ಯೋಧ ಗುರು ವಿಮೆ ಮಾಡಿಸಿದ್ದು, ಅವರು ಹುತಾತ್ಮರಾಗಿದ್ದ ವಿಚಾರ ತಿಳಿಯುತ್ತಿದ್ದಂತೆ ನಾಮಿನಿ ಖಾತೆಗೆ ಹಣ ವರ್ಗಾವಣೆ ಮಾಡಿದೆ. ಈಗಾಗಲೇ ನಾಮಿನಿ ಖಾತೆದಾರರಿಗೆ ಯಾವುದೇ ಪ್ರಮಾಣ ಪತ್ರದ ದಾಖಲೆಯನ್ನು ಕೇಳದೇ ಹಣ ವರ್ಗಾಯಿಸಲಾಗಿದೆ. ರೂ. 3,82,199 ರೂ ವಿಮೆ ಮರಣದಾವೆ ಮೊತ್ತವನ್ನು ನೀಡಿದೆ. ಯಾವುದೇ ರೀತಿಯ ಸಾಕ್ಷಿ , ದಾಖಲೆಗಳನ್ನು ಬಯಸದೇ ದಿಢೀರ್ ಹಣ ರವಾನೆ ಮಾಡಿದ ಕಂಪನಿ ಪಗ್ಗೆ ಸಾಮಾಝಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ದೊರೆಯುತ್ತಿದೆ.
Comments