ಹುತಾತ್ಮ ಯೋಧನಿಗೆ ಬಿಬಿಎಂಪಿ ವತಿಯಿಂದ 20 ಲಕ್ಷ ರೂ ಧನ ಸಹಾಯ….!
ನಿನ್ನೆ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯದ ಯೋಧ ಕೂಡ ಒಬ್ಬರು. ಭಯೋತ್ಪಾದಕರ ದಾಳಿಗೆ ಈಗಾಗಲೇ 42 ಕ್ಕೂ ಹೆಚ್ಚು ಯೋಧರು ಪ್ರಾಣ ತೆತ್ತಿದ್ದಾರೆ. ಯೋಧರ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. ವೀರ ಮರಣ ಹೊಂದಿದ ಯೋಧ ಗುರುವಿನ ಕುಟುಂಬಕ್ಕೆ ಸಹಾಯ ನೀಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಜಿಲ್ಲಾಡಳಿತ ವತಿಯಿಂದ ಹುತಾತ್ಮ ಕುಟುಂಬವನ್ನು ಸಂಪರ್ಕಿಸಿ ಮುಮದಿನ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಉಗ್ರರ ದಾಳಿಯಲ್ಲಿ ವೀರ ಮರಣ ಅಪ್ಪಿರುವ ಮಂಡ್ಯದ ಯೋಧ ಹೆಚ್. ಗುರು ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಬಿಬಿಎಂಪಿ ಮುಂದಾಗಿದೆ.ಮದ್ದೂರಿನ ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಹೆಚ್. ಗುರು ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಬಿಬಿಎಂಪಿ ಮೇಯರ್ ಘೋಷಿಸಿದ್ದಾರೆ.198 ಸದಸ್ಯರ ತಿಂಗಳ ಗೌರವಧನ ಯೋಧನ ಕುಟುಂಬಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಮೇಯರ್ ಮನವಿಗೆ ಸ್ಪಂದಿಸಿರುವ ಪಾಲಿಕೆ ಸದಸ್ಯರು ಒಟ್ಟು 20 ಲಕ್ಷ ರೂ. ಧನಸಹಾಯವನ್ನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ನಮ್ಮ ಮಂಡ್ಯದ ಯೋಧ ಗುರು ಅವರನ್ನೂ ನಾವು ಕಳೆದುಕೊಂಡಿದ್ದೇವೆ. ಕುಟುಂಬದ ದುಃಖ ನೋಡಲಾಗಲಿಲ್ಲ. ಅವರ ಪತ್ನಿಯ ಅಕೌಂಟ್ಗೆ ಬಿಬಿಎಂಪಿ ಸದಸ್ಯರ ಒಂದು ತಿಂಗಳ ಗೌರವ ಧನವನ್ನು ಕೊಡುತ್ತೇವೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಹುತಾತ್ಮ ಯೋಧನ ಪತ್ನಿ ಗೆ ನೌಕರಿ ಕೊಡುವಲ್ಲಿ ನಿರ್ಧಾರ ಮಾಡಿದ್ದಾಗಿ ಮಾಹಿತಿ ಬಂದಿದೆ.
Comments