ಪ್ರೇಮಿಗಳ ದಿನದಂದೇ ಕನಸಿನ ಹುಡುಗನ ಸರ್ಚಿಂಗ್ ನಡೀತಿದ್ಯಂತೆ ಈ ನಟಿಗೆ...?!!

ಇಂದು ವ್ಯಾಲೆಂಟೇನ್ಸ್ ಡೇ ಪ್ರಯುಕ್ತ ಸ್ಯಾಂಡಲ್’ವುಡ್’ನ ಸ್ಟಾರ್’ಗಳೆಲ್ಲಾ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂದಹಾಗೇ ನಟಿ ಆಶಿಕಾ ಪ್ರೇಮಿಗಳ ದಿನಾಚರಣೆಯಂದು ಪ್ರತಿಕ್ರಿಯಿಸಿದ್ದಾರೆ. ಪ್ರೀತಿಯ ಆಚರಣೆಗೆ ಇಂಥದ್ದೇ ಒಂದು ದಿನ ಬೇಕು ಅನ್ನೋದರಲ್ಲಿ ನನಗೆ ನಂಬಿಕೆ ಇಲ್ಲ. ಪ್ರೀತಿಸುವ ಪ್ರತೀ ದಿನವೂ ಸಂಭ್ರಮ, ಸಂತಸ ಇರಬೇಕು ಅನ್ನೋದು ನನ್ನ ಸಿದ್ಧಾಂತ. ಹಾಗಂತಾ ಅದು ಓರ್ವ ಹುಡುಗ-ಹುಡುಗಿ ನಡುವಿನ ಪ್ರೀತಿಯಷ್ಟೇ ಅಲ್ಲ. ಮಕ್ಕಳ ಮೇಲೆ ಅಪ್ಪ-ಅಮ್ಮನ ಪ್ರೀತಿ. ತಂದೆ-ತಾಯಿಗೆ ಮಕ್ಕಳ ಮೇಲಿನ ಪ್ರೀತಿ.
ಪ್ರೀತಿಯ ಆಚರಣೆಗೆ ಇಂಥದ್ದೇ ಒಂದು ದಿನ ಬೇಕು ಅನ್ನೋದರಲ್ಲಿ ನನಗೆ ನಂಬಿಕೆ ಇಲ್ಲ. ಪ್ರೀತಿಸುವ ಪ್ರತೀಯೊಬ್ಬರು ತಮ್ಮ ಪ್ರೀತಿಯನ್ನ ಸರಿಯಾಗಿ ನಂಬಿಕೆ ಇಟ್ಟು ಪ್ರೀತಿಸಿದರೇ ಸಾಕು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ. ಪ್ರೀತಿಸುವ ಪ್ರತಿ ದಿನವೂ ಸಂಭ್ರಮ ಇರಬೇಕು, ಸಂತಸ ಇರಬೇಕು ಅನ್ನೋದು ನನ್ನ ಸಿದ್ಧಾಂತ. ಹಾಗಂತ ಅದು ಅಣ್ಣ- ತಮ್ಮ ಹಾಗೂ ತಂಗಿಯರ ನಡುವಿನ ಪ್ರೀತಿ, ಗಂಡ-ಹೆಂಡತಿ ನಡುವಿನ ಪ್ರೀತಿಯೂ ಸೇರಿ ಪ್ರತಿ ಮನಸ್ಸುಗಳ ನಡುವಿನ ಪ್ರೀತಿ ನಿರಂತರವಾಗಿ ಸಂಭ್ರಮದಲ್ಲಿರಬೇಕು ಎನ್ನುವುದು ನನ್ನ ನಂಬಿಕೆ.ಪ್ರೀತಿಸಿದವರು. ನನ್ನ ಸುತ್ತಮುತ್ತಲೇ ಪ್ರೀತಿಸಿ ಮದುವೆಯಾದವರು ಇದ್ದಾರೆ. ಸರ್ಕಲ್ ಜತೆಗೆ ಫ್ಯಾಮಿಲಿ ಕಡೆಯಲ್ಲೂ ಸಾಕಷ್ಟು ಜನ ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ಲೈಫ್ ಕೂಡ ಸಂಭ್ರಮ, ಸಂತಸದಲ್ಲಿ ಇರುವುದನ್ನು ನೋಡಿದಾಗೆಲ್ಲ ನನಗೂ ಅಂತಹದೊಂದು ಪ್ರೀತಿ ಸಿಗಬೇಕು ಅಂತೆನಿಸುತ್ತೆ. ಆದರೆ, ಆ ತರಹದ ಹುಡುಗ ನನಗಿನ್ನು ಸಿಕ್ಕಿಲ್ಲ. ವ್ಯಾಲೆಂಟೇನ್ಸ್ ಡೇ ದಿನದ ಪ್ರಯುಕ್ತ ವಿಶ್ ಮಾಡಿದ್ದಾರೆ.
Comments