2019 ನೇ ಸಾಲಿನಲ್ಲಿ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್….!!!

14 Feb 2019 9:15 AM | General
425 Report

ಶಿಕ್ಷಕರಿಗೆ 2019 ನೇ ಸಾಲಿನಲ್ಲಿ ಒಂದು ಸಿಹಿ ಸುದ್ದಿ ಸಿಕ್ಕಿದಂತಾಗಿದೆ. ಶಿಕ್ಷಕರ ನೇಮಕಾತಿಯಿಂದ ಅವರ ವರ್ಗಾವಣೆ ತನಕವೂ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತಲೇ ಇದ್ದಾರೆ. ಆದರೆ ಈ ಬಾರಿ ಶಿಕ್ಷಕರಿಗೆ ಭರ್ಜರಿ ಆಫರ್ ಸಿಕ್ಕಿದಂತಾಗಿದೆ. ಶಿಕ್ಷಕರ ವರ್ಗಾವಣೆಯ ಕನಿಷ್ಟ ಮಿತಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸುವ ಸಂಬಂಧ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವಿಧೇಯಕ 2018 ಕ್ಕೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಗಿದೆ.

 ವರ್ಗಾವಣೆ ವಿಚಾರದಲ್ಲಿ ಶಿಕ್ಷಕರಿಗೆ ಇದೊಂದು ದೊಡ್ಡ ತಲೆ ನೋವಾಗಿತ್ತು. ಸದ್ಯ ಆ ಸಮಸ್ಯೆಯಿಂದ ಶಿಕ್ಷಕರು ವಿಮುಕ್ತಿಗೊಂಡಿದ್ದಾರೆ. ಶಿಕ್ಷಕರು ವರ್ಗಾವಣೆಗೊಳ್ಳಲು ಹಾಲಿ ಸ್ಥಳದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಬೇಕೆಂಬ ನಿಯಮವಿದೆ. ಇದನ್ನು ಸಡಿಲಿಸಿ 3 ವರ್ಷಕ್ಕೆ ಇಳಿಸಲಾಗುತ್ತಿದೆ. ಪತಿ-ಪತ್ನಿ ಪ್ರಕರಣದಲ್ಲಿ ಇಬ್ಬರ ಪೈಕಿ ಯಾರಿಗಾದರೂ ಗಂಭೀರ ಕಾಯಿಲೆಯಿದ್ದರೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಪಡೆದು ಒಂದೇ ಸ್ಥಳದಲ್ಲಿ ನಿಯುಕ್ತಿ ಮಾಡಿಸಿಕೊಳ್ಳಬಹುದಾಗಿದೆ. ಅದಲ್ಲದೇ ಶಿಕ್ಷಕ ದಂಪತಿ ಮಕ್ಕಳಿಗೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಇದ್ದರೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಕೋರಿ ಮನವಿ ಸಲ್ಲಿಸಬಹುದಾಗಿದೆ. ಶಿಕ್ಷಕನ ಪತ್ನಿ ಅಥವಾ ಶಿಕ್ಷಕಿಯ ಪತಿ ಸರ್ಕಾರಿ ಹಾಗೂ ಸಾರ್ವಜನಿಕ ಸ್ವಾಮ್ಯದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹ ಸ್ಥಳಗಳಿಗೂ ವರ್ಗಕ್ಕೆ ಅವಕಾಶವಿದೆ.

Edited By

Manjula M

Reported By

Kavya shree

Comments