ಬಿಪಿಎಲ್, ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್.. ಯಾವ ರೀತಿಯಲ್ಲಿ ಸಿಗಲಿದೆ ಈ ಹೊಸ ಯೋಜನೆ..?
ಈಗಾಗಲೇ ಮೊದಲೇ ತಿಳಿಸಿರುವಂತೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಇಂದು ಮಂಡನೆಯಾಗಿದೆ, ಲೋಕಸಭೆ ಚುನಾವಣೆಯ ಸಮಯದಲ್ಲಿ ಜನರ ಮನಗೆಲ್ಲಲು ಮೈತ್ರಿ ಸರ್ಕಾರಕ್ಕೆ ಈಗ ಮಂಡಿಸಿದ ಬಜೆಟ್ ತುಂಬಾ ಮುಖ್ಯವಾಗಿತ್ತು.. ಪ್ರತಿಪಕ್ಷವಾದ ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಕೂಡ ಇಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದಾರೆ..ಎಲ್ಲರೂ ಅಂದುಕೊಂಡಂತೆ ಇಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಿದೆ..
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳನ್ನು ಸೇರಿಸಿ 'ಆಯುಷ್ಮಾನ್ ಕರ್ನಾಟಕ' ಎಂಬ ಸೇವೆಯನ್ನು ಜಾರಿಗೆ ತರಲಾಗುತ್ತಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಈ ಯೋಜನೆಯು ಬಿಪಿಎಲ್ ಅಷ್ಟೇ ಅಲ್ಲ, ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಆರೋಗ್ಯ ಸೇವೆ ನೀಡಲಿದೆ ಎಂದು ಹೇಳಿದರು. ಇನ್ನು ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮುಖ್ಯ ಪಾತ್ರ ವಹಿಸುವ ಆಶಾ ಕಾರ್ಯಕರ್ತೆಯರ ಗೌರವಧನವನ್ನು 500 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ಗೌರವಧನವು ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು.. ಒಟ್ಟಾರೆಯಾಗಿ ಈ ಯೋಜನೆಯಿಂದ ಬಡವರಿಗೆ ತುಂಬಾ ಅನುಕೂಲವಾಗಲಿದೆ..
Comments