ಸಿಎಂ ಕುಮಾರಸ್ವಾಮಿ ಬಜೆಟ್'ನಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಬಂಪರ್ ಕೊಡುಗೆ...

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ದೋಸ್ತಿ ಸರ್ಕಾರ ಬಜೆಟ್ ಮಂಡನೆ ಮಾಡಲಾಗಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಈ ಬಾರಿ ಬಜೆಟ್ ನಲ್ಲಿ ಕೋಟಿ ಕೋಟಿ ಅನುದಾನ ಕೊಡಲಾಗಿದೆ. ರಾಜ್ಯದಲ್ಲಿ ನಾಲ್ಕು ಹೊಸ ತಾಲ್ಲೂಕುಗಳ ಘೋಷಣೆ ಮಾಡಲಾಗುತ್ತದೆ. ಈ ಬಜೆಟ್ ನಲ್ಲಿ ಮುಂದಿನ ಪೀಳಿಗೆಗೆ ಸಂವಿಧಾನ ಪರಿಚಯಿಸುವಂತಹ ನಿಟ್ಟಿನಲ್ಲಿ ಸಂವಿಧಾನ ಮ್ಯೂಸಿಯಂ ಯನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ. ಅಲೆಮಾರಿ ಸಮುದಾಯ ಭವನಕ್ಕೂ ಬಜೆಟ್'ನಲ್ಲಿ ಅನುದಾನ ನೀಡಲಾಗಿದೆ.
- ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ.
- ಆಟೋ, ಟ್ಯಾಕ್ಸಿ ಚಾಲಕರಿಗೆ ವಿಮೆ ಸೌಲಭ್ಯ.
- ಆಟೋ, ಟ್ಯಾಕ್ಸಿ ಚಾಲಕರಿಗೆ ಸಾರಥಿ ಸೂರು ವಸತಿ ಯೋಜನೆ
- ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲೆಯ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
- ರಾಜ್ಯದಲ್ಲಿ ಮತ್ತೆ ಹೊಸ ನಾಲ್ಕು ತಾಲೂಕಗಳ ಘೋಷಣೆ
- 1500 ಹೊಸ ಶಾಲಾ ಕಾಲೇಜುಗಳ ನಿರ್ಮಾಣ
- ತುಮಕೂರಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ
- 20 ಕೋಟಿ ವೆಚ್ಚದಲ್ಲಿ ಬೆಂಗಳೂರಲ್ಲಿ ಸಂವಿಧಾನ ಮ್ಯೂಸಿಯಂ ನಿರ್ಮಾಣ
- ಬೆಂಗಳೂರು ಟ್ಯಾಕ್ಸಿ ಆಟೋ ಚಾಲಕರಿಗೆ ಸಾರಥಿ ಸೂರು ಯೋಜನೆ
- ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟೂರಿಗೆ 25 ಕೋಟಿ ರೂ. ಹೆಚ್ಚಳ
Comments