ಬ್ಯಾಂಕ್’ನಿಂದ ಸಿಗುತ್ತಿದೆ ರೈತರಿಗೆ ಗುಡ್ ನ್ಯೂಸ್…?!!!

07 Feb 2019 4:06 PM | General
423 Report

ಅಂದಹಾಗೇ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮೂಲಕ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಕೆಲ ಸಾರ್ವಜನಿಕ ವಲಯಗಳಿಗೆ ಈ ವರ್ಷ ಬಂಪರ್ ಆಫರ್ಗಳು ಸಿಗುತ್ತಿವೆ. ಸದ್ಯ ರೈತ ವಲಯಕ್ಕೆ ಬ್ಯಾಂಕ್'ನಿಂದ ಭರ್ಜರಿ ಆಫರ್ ಸಿಕ್ಕಿದೆ.ದೇಶದ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ದೇಶದ  ರೈತರಿಗೂ ಸಿಹಿ ಸುದ್ದಿಯೊಂದನ್ನು ನೀಡಿದೆ. ಮನೆ ಹಾಗೂ ವಾಹನ ಸಾಲ ಪಡೆಯುವ ಬ್ಯಾಂಕ್ ಗ್ರಾಹಕರಿಗೆ ಬಡ್ಡಿ ಇಳಿಕೆಯ ಭರವಸೆ ಮೂಡಿಸಿದೆ ಭಾರತೀಯ ರಿಸರ್ವ್ ಬ್ಯಾಂಕ್.

ಬ್ಯಾಂಕ್  ರೆಪೋ ದರವನ್ನು ಕಡಿತ ಮಾಡುವ ಮೂಲಕ ದೇಶದ ರೈತರಿಗೂ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ಹಿಂದೆ ಯಾವುದೇ ಆಧಾರ ನೀಡದೇ 1 ಲಕ್ಷ ರುಪಾಯಿಗಳವರೆಗೆ  ಸಾಲ ಪಡೆಯುವ ಸೌಲಭ್ಯವಿದ್ದು, ಈಗ ಈ ಮಿತಿಯನ್ನು 1.60 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಈ ಯೋಜನೆಯಿಂದ ಬಾರೀ ಅನುಕೂಲವಾಗಲಿದೆ.2010 ರಲ್ಲಿ ಆಧಾರ/ಜಾಮೀನು ನೀಡದೆ ರೈತರ ಸಾಲ ಪಡೆಯುವ ಮಿತಿಯನ್ನು ಒಂದು ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಿದ್ದು, ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಈ ಮೊತ್ತವನ್ನು ಏರಿಕೆ ಮಾಡಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.  ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡಿಸಿದ ಪಿಯೂಶ್ ಗೋಯಲ್ ಸಣ್ಣ ರೈತರಿಗೆ ನೆರವಾಗುವ ಉದ್ದೇಶದಿಂದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್' ಯೋಜನೆಯನ್ನು ಘೋಷಿಸಿದ್ದು, ಇದರಿಂದಾಗಿ ರೈತರ ಖಾತೆಗಳಿಗೆ ಆರು ಸಾವಿರ ರೂ. ನೇರವಾಗಿ ಜಮಾ ಆಗಲಿದೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಕೊಡುಗೆಯನ್ನು ಘೋಷಿಸಿದೆ.

Edited By

Kavya shree

Reported By

Kavya shree

Comments