ಪ್ರತಿ ತಿಂಗಳು ನೀವು ಇಷ್ಟು ಹಣ ಹೂಡಿಕೆ ಮಾಡಿದ್ರೆ ನಿಮಗೆ ಸಿಗೋದು ಎಷ್ಟು ಲಕ್ಷ ಗೊತ್ತಾ..!?
ಇತ್ತಿಚಿನ ಕಾಲದಲ್ಲಿ ಹಣ ಅನ್ನೋದು ತುಂಬಾನೇ ಮುಖ್ಯ.. ಆದರೆ ದುಡ್ಡು ಮಾಡೋದು ಹೇಗೆ ಅನ್ನೋದೆ ಒಂದು ದೊಡ್ಡ ಚಿಂತೆ.. ಅದಕ್ಕಾಗಿಯೇ ಇಲ್ಲೊಂದು ಫ್ಲಾನ್ ಇದೆ ನೋಡಿ.. ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಹಣ ವಾಪಸ್ ಪಡೆಯುವುದನ್ನು ಸ್ಮಾರ್ಟ್ ಇನ್ವೆಸ್ಟ್ಮೆಂಟ್ ಎನ್ನುತ್ತಾರೆ. ನೀವೂ ಸ್ಮಾರ್ಟ್ ಇನ್ವೆಸ್ಟರ್ ಆಗಬಯಸಿದ್ದರೆ ಪಿಪಿಎಫ್ ಸ್ಕೀಂನಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ ಲಕ್ಷಾಧಿಪತಿಗಳಾಗಿರಿ.. ಹೇಗೆ ಅಂತಿರಾ.. ಮುಂದೆ ಓದಿ..?
ನೀವು ಯಾವಾಗ ಬೇಕಾದರೂ ಕೂಡ ಪಿಪಿಎಫ್ ಸ್ಕೀಂನಲ್ಲಿ ಅಕೌಂಟ್ ಓಪನ್ ಮಾಡಿ ಅದರಲ್ಲಿ ಹಣ ಹೂಡಿಕೆ ಮಾಡಬಹುದು.. ಅಷ್ಟೆ ಅಲ್ಲದೆ ತೆರಿಗೆಯಲ್ಲೂ ಕೂಡ ರಿಯಾಯಿತಿ ಸಿಗುತ್ತದೆ.. ಸಮಯ ಮುಗಿದ ನಂತರವೂ ನೀವು ಸಿಕ್ಕ ಹಣಕ್ಕೆ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇಲ್ಲ... ಯಾವುದೇ ವ್ಯಕ್ತಿ ಪಿಪಿಎಫ್ ಸ್ಕೀಂನಲ್ಲಿ ಪ್ರತಿ ತಿಂಗಳು 12 ಸಾವಿರ ರೂಪಾಯಿ ಹೂಡಿಕೆ ಮಾಡ್ತಾನೆ ಎಂದಾದರೆ 15 ವರ್ಷಕ್ಕೆ ಆತನಿಗೆ 39,65,072 ರೂಪಾಯಿ ಸಿಗಲಿದೆ. ಸದ್ಯ ಪಿಪಿಎಫ್ ಅಕೌಂಟ್ ಗೆ ಶೇಕಡಾ 8ರಷ್ಟು ಬಡ್ಡಿ ಸಿಗುತ್ತಿದೆ.. ಕೇಂದ್ರ ಸರ್ಕಾರ ಮೂರು ತಿಂಗಳಿಗೊಮ್ಮೆ ಬಡ್ಡಿ ದರದಲ್ಲಿ ಬದಲಾವಣೆಯನ್ನು ಮಾಡುತ್ತಿರುತ್ತದೆ.. ಒಬ್ಬ ವ್ಯಕ್ತಿ ಒಂದು ಪಿಪಿಎಫ್ ಖಾತೆ ಮಾತ್ರ ತೆರೆಯಬಹುದಾಗಿದೆ. ಮಕ್ಕಳ ಹೆಸರಿನಲ್ಲೂ ಪಿಪಿಎಫ್ ಖಾತೆ ತೆರೆಯಬಹುದು. ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ 15000 ರೂಪಾಯಿ ಹೂಡಿಕೆ ಮಾಡಬಹುದು. ತೆರಿಗೆ ಉಳಿಸಲು ಇದೊಂದು ಒಳ್ಳೆ ಹೂಡಿಕೆ ಯೋಜನೆ ಇದಾಗಿದೆ.. ನೀವು ಕೂಡ ಹಣವನ್ನು ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಿ.. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ…
Comments