102 ಬಾರಿ ರಾಂಗ್ ಪಾರ್ಕಿಂಗ್ ಮಾಡಿದ್ದ ಕ್ಯಾಬ್ ಚಾಲಕನಿಗೆ ಬಿದ್ದ ದಂಡ ಎಷ್ಟು ಅಂತ ಕೇಳುದ್ರೆ ಶಾಕ್ ಆಗ್ತೀರಾ..?

ಕಾನೂನು ಉಲ್ಲಂಘನೆ ಮಾಡೋದು ಅಂದರೆ ಕೆಲವರಿಗೆ ತುಂಬಾ ಇಷ್ಟ… ಟ್ರಾಫಿಕ್ ಸಿಗ್ನಲ್ಗಳನ್ನು ಜಂಪ್ ಮಾಡೋದು ಅಂದರೆ ಕೆಲವರಿಗೆ ತುಂಬಾ ಕ್ರೇಜ್.. ಯಾಕೆಂದ್ರೆ ಇಲ್ಲೊಬ್ಬ ಕಾರು ಮಾಲೀಕ ಕೂಡಾ 102 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೇ ಸಾವಿರಾರು ರೂಪಾಯಿ ದಂಡ ಹಾಕಿಸಿಕೊಂಡಿದ್ದಾನೆ. ಇತ್ತೀಚೆಗೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚಾಗುತ್ತಲೇ ಇವೆ..
ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದು ಗೊತ್ತಿರುವ ವಿಷಯವೇ... ಆದರೆ ಇಲ್ಲೊಬ್ಬ ಮಹಾನುಭಾವ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ದರೂ ಬರೋಬ್ಬರಿ 102 ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿ ಕೊನೆಗೂ ಪೊಲೀಸರ ಕೈಗೆ ತಗುಲಿ ಹಾಕಿಕೊಂಡಿದ್ದಾನೆ. ಇಲ್ಲೊಬ್ಬ ಕ್ಯಾಬ್ ಚಾಲಕ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ಒಂದಲ್ಲಾ, ಎರಡಲ್ಲಾ ಬರೋಬ್ಬರಿ 102 ಬಾರಿ ರಾಂಗ್ ಸೈಡ್ ಪಾರ್ಕಿಂಗ್ ಕೇಸ್ ಮೇಲೆ ತಹುಲಿ ಹಾಕಿಕೊಂಡಿದ್ದಾನೆ... ರಾಂಗ್ ಸೈಡ್ ಪಾರ್ಕಿಂಗ್ ಮತ್ತು ಕಾನೂನು ಬಾಹಿರವಾಗಿ ಓವರ್ ಸ್ಪೀಡ್ ಮಾಡಿದ್ದ ಹಿನ್ನೆಲೆ ರೂ.16,565 ದಂಡ ವಸೂಲಿ ಮಾಡಲಾಗಿದೆ.
Comments