ನನ್ನ ಮಗನನ್ನೇ ನಾನು ಬಲಿ ಕೊಡಲು ಸಿದ್ಧ, ನರಬಲಿಗೆ ಅನುಮತಿ ಕೊಟ್ರೆ…!!!

02 Feb 2019 2:05 PM | General
366 Report

ಅಂದಹಾಗೇ ಇದೆಂಥಾ… ವಿಚಿತ್ರ ಪ್ರಕರಣ ಅಂತಹ ಆಶ್ಚರ್ಯ ಆಗಬಹುದು.ಹೌದು ನರಬಲಿಗೆ ಅನುಮತಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ವಿಚಿತ್ರ ಘಟನೆ ಬೆಗುಸರೈ ಜಿಲ್ಲೆಯಲ್ಲಿ ನಡೆದಿದೆ. ಮಂತ್ರವಾದಿಯೊಬ್ಬ ಕ್ಷುದ್ರ ದೇವತೆಯನ್ನು ಸಂತೃಪ್ತಗೊಳಿಸಲು ನರ ಬಲಿಗೆ ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಿದ್ದಾನೆ. ಈ ಸಂಬಂಧ ಆತ ಬೆಗುಸರೈನ ಅಧಿಕಾರಿಗೆ ಮನವಿ ಪತ್ರವೊಂದನ್ನು ಬರೆದಿದ್ದಾನೆ, ಸದ್ಯ ಆ ಪತ್ರ ಎಲ್ಲೆಡೆ ವೈರಲ್ ಆಗಿದೆ.

ಮಂತ್ರವಾದಿ ಸುರೇಂದ್ರ ಸಿಂಗ್ ಬರೆದಿರುವ ಈ ಪತ್ರದಿಂದ ಜಿಲ್ಲಾಡಳಿತವೇ ಬೆಚ್ಚಿ ಬಿದ್ದಿದೆ. ಮಾನವ ಬಲಿ ಕೊಡೋಕೆ ನನಗೆ ಅವಕಾಶ ಕೊಡಿ. ನಾನು ಮೊದಲ ಬಲಿಯನ್ನೇ ನನ್ನ ಮಗನನ್ನು ಕೊಡುತ್ತೇನೆ. ಮಾನವ ಬಲಿ ಅಪರಾಧವಲ್ಲ. ಇದಕ್ಕೆ ಅವಕಾಶ ದೊರೆತರೆ ಇಂಜಿನಿಯರ್ ಆಗಿರುವ ನನ್ನ ಮಗನಿಂದಲೇ ನರಬಲಿ ಆರಂಭಿಸುತ್ತೇನೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಸುರೇಂದ್ರ ಸಿಂಗ್ ಜಿಲ್ಲಾಡಳಿತಕ್ಕೆ ಜ.29ರಂದು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧಿಕಾರಿ, ಇಂಥ ಯಾವುದೇ ಪತ್ರ ತಮಗೆ ಬಂದಿಲ್ಲ ಎಂದು ಎಸ್‍ಡಿಒ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಇದೊಂದು ಗಂಭೀರ ವಿಷಯ. ನರಬಲಿ ಅಕ್ರಮ ಮತ್ತು ಕಾನೂನು ಬಾಹಿರ. ಈ ಪತ್ರಕ್ಕಾಗಿ ಮತ್ತು ಇದನ್ನು ಬರೆದ ಮಂತ್ರವಾದಿಗಾಗಿ ನಾವು ಶೋಧ ನಡೆಸುತ್ತಿದ್ದೇವೆ. ಈತನ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಅಂದಹಾಗೇ ಈ ಪತ್ರ  ಸೋಶಿಯಲ್ ಮಿಡಿಯಾದಲ್ಲಿ  ಹರಿದಾಡುತ್ತಿದ್ದು,  ಸದ್ಯ ಆ ಲೆಟರ್ ಅಪರಿಚಿತ ಸಂಘಟನೆಯಾದ ಬಿಂದು ಮಾ ಮಾನವ್ ಕಲ್ಯಾಣ್ ಸಂಸ್ಥೆ  ಲೆಟರ್ ಹೆಡ್ ನಲ್ಲಿ ಸಿಂಗ್ ಈ ಪತ್ರ ಬರೆದಿದ್ದಾನೆ. ಈ ಸಂಘವು ಸಹಕಾರ ಸಂಘಗಳ ನೋಂದಣಿ ಕಾಯ್ದೆ ಅಡಿ ನೋಂದಾಯಿತವಾಗಿದ್ದು ತಾನು ಇದರ ಮುಖ್ಯಸ್ಥ ಎಂದು ಆತ ಹೇಳಿಕೊಂಡಿದ್ದಾನೆ. ಅಂದಹಾಗೇ ಈ ಪತ್ರದ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಣಕೊಂದು ಕೂಡ ವೈರಲ್ ಆಗಿದೆ. ಆ ವಿಡಿಯೋದಲ್ಲಿ ನರಬಲಿ ಕಾಮಕ್ಯ ದೇವತೆನನಗೆ ತಿಳಿಸಿದ್ದಾರೆ. ಈತ ತನ್ನ ಪತ್ರದ ಬಗ್ಗೆ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡುತ್ತಿರುವ ವಿಡಿಯೋ ತುಣುಕು ಸಹ ವೈರಲ್ ಆಗಿದೆ. ಒಂದು ವೇಳೆ ಸರ್ಕಾರ ನರಬಲಿಗೆ ಅವಕಾಶ ಕೊಟ್ಟರೆ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ನನ್ನ ಮಗನಿಂದಲೇ ಮೊದಲ ನರಬಲಿ ಆರಂಭಿಸುತ್ತೇನೆ. ಅಂದಹಾಗೇ ನನ್ನ ಮಗನಿಗೆ  ದೇವಸ್ಥಾನ ಕಟ್ಟಲು ಹಣ ಕೇಳಿದೆ. ಆದರೆ ಅವನು ನನಗೆ ಹಣ ನೀಡಲಿಲ್ಲ ಆತ ನನ್ನ ಮಗನಲ್ಲ ಆತ ರಾವಣ. ಅವನನ್ನೇ ಮೊದಲು ದೇವರಿಗೆ ನರಬಲಿ ಕೊಡುತ್ತೇನೆ ಎಂದು ಮಂತ್ರವಾದಿ ಹೇಳಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.ಈತ ವಾಸಿಸುತ್ತಿರುವ ಸುತ್ತ-ಮುತ್ತಲಿನವರು ಇವನೊಬ್ಬ  ಹುಚ್ಚ, ದುಷ್ಟ, ಪ್ರಚಾರಗಿಟ್ಟಿಸಿಕೊಳ್ಳಲು ವಾಮಾ ಮಾರ್ಗವನ್ನು ಅನುಸರಿಸುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ

Edited By

Kavya shree

Reported By

Kavya shree

Comments