ಈ ಬಾರಿ ಬಜೆಟ್’ನಲ್ಲಿ ಕಾರ್ಮಿಕರಿಗೆ ಸಿಕ್ತು ಭರ್ಜರಿ ಕೊಡುಗೆ...
ಕೇಂದ್ರ ಬಜೆಟ್ ಮಂಡನೆಯಲ್ಲಿ ಈ ಬಾರಿ ಮೋದಿ ಸರ್ಕಾರ ಕೆಲ ವಲಯಗಳಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಲೋಕ ಸಭಾ ಚುನಾವಣಾ ಪೂರ್ವ ಬಜೆಟ್ ನಲ್ಲಿ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಈ ಬಾರಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪಿಂಚಣಿ ಘೋಷಿಸಿದ್ದಾರೆ. ಪಿಎಂ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಪಿಂಚಣಿ ಪಡೆಯುವವರು 15 ಸಾವಿರ ರೂಪಾಯಿವರೆಗೆ ಸಂಬಳ ಪಡೆಯುವ ಅಸಂಘಟಿತ ವಲಯದವರಾಗಿರುತ್ತಾರೆ. ಈ ಪಿಂಚಣಿ ಪಡೆಯಲು ಕಾರ್ಮಿಕರು ಪ್ರತಿ ತಿಂಗಳು 100 ರೂಪಾಯಿ ನೀಡಬೇಕು. ಅಷ್ಟೇ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ.ಈ ಯೋಜನೆಯ ಲಾಭ ಅಸಂಘಟಿತ ವಲಯದ ಅತ್ಯಂತ ದುರ್ಬಲ ವರ್ಗದ ಶೇಕಡಾ 25ರಷ್ಟು ಮಂದಿ ಪಡೆಯಲಿದ್ದಾರೆ. ಅಂದಹಾಗೇ ಈ ಪಿಂಚಣಿ ಭಾಗ್ಯ ಕಾರ್ಮಿಕರ ನಿವೃತ್ತಿ ನಂತರ ಸಿಗಲಿದೆ.ಈ ಯೋಜನೆಯಡಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಸುಮಾರು 10 ಕೋಟಿ ಕಾರ್ಮಿಕರಿಗೆ ಮನೆ ಕೆಲಸದವರು, ಚಾಲಕರು, ಪ್ಲಂಬರ್, ವಿದ್ಯುತ್ ಕಾರ್ಮಿಕರಿಗೆ ಲಾಭ ಸಿಗಲಿದೆ. ದೇಶದಲ್ಲಿ 50 ಕೋಟಿ ಉದ್ಯೋಗಿಗಳಿದ್ದು ಅದ್ರಲ್ಲಿ ಶೇಕಡಾ 90ರಷ್ಟು ಮಂದಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡ್ತಾರೆ. ಅಸಂಘಟಿತ ವಲಯದಲ್ಲಿ ಫ್ಲಂಬರ್ ಕಾರ್ಮಿಕರು, ವಿದ್ಯುತ್ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದರ ಲಾಭ ಸಿಗಲಿದೆ.
Comments