ಮೋದಿ ಬಜೆಟ್ ಮಂಡನೆ: ಸಿಕ್ಕ ಯೋಜನೆಗಳು ಯಾವುವು..?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವರಾದ ಪಿಯೂಷ್ ಗೋಯೆಲ್ ಮಂಡಿಸಿದ್ದಾರೆ. ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೇ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ನೆನೆದ ಗೋಯೆಲ್, ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಸಿದರು. ನಂತರ ಕೇಂದ್ರ ಸರ್ಕಾರದ 5 ವರ್ಷಗಳ ಸಾಧನೆಯನ್ನು ಹೇಳಿದ ಗೋಯೆಲ್, ಕಳೆದ 5 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಕೆಲಸಕ್ಕೆ ಜಗತ್ತು ಬೆರಗಾಗಿದೆ ಎಂದು ತಿಳಿಸಿದರು. ಪ್ರತಿಯೊಂದೂ ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿದ್ದು, ನವ ಭಾರತದ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆಯನ್ನು ಕೂಡ ಆ ಸಮಯದಲ್ಲಿ ತಿಳಿಸಿದರು..
ಪಿಯೂಷ್ ಗೋಯಲ್ ಅವರು, ಷೋಷಿಸಿದ ಯೋಜನೆಗಳು ಈ ಕೆಳಕಂಡಂತಿವೆ....
- ಜಿಎಸ್ಟಿ ಕೊಡುಗೆ
- ಹಣದುಬ್ಬರ ದರ ನಿಯಂತ್ರಣ
- ನವ ಭಾರತ ನಿರ್ಮಾಣ
- ಗೃಹ ನಿರ್ಮಾಣ
- ಆರೋಗ್ಯ ವಲಯ
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ
- ಸ್ವಚ್ಛತಾ ಭಾರತ ಅಭಿಯಾನ ಮುಂದುವರಿಕೆ
- ಕಾಮಧೇನು ಆಯೋಗ ರಚನೆ
ಈ ರೀತಿಯ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
Comments