ಸ್ವಂತ ಅಣ್ಣನನ್ನೇ ಮದುವೆಯಾದ ತಂಗಿ..!! ಕಾರಣ ಕೇಳುದ್ರೆ ಶಾಕ್ ಆಗ್ತೀರಾ..?
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಂಬಂಧಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಾರೆ… ಆದರೆ ಕೆಲವೊಂದು ಸಂಬಂಧಗಳು ಅದನ್ನು ಹಾಳು ಮಾಡುವಂತೆ ಇರುತ್ತವೆ… ಪಂಜಾಬ್‌ನಲ್ಲಿ ಸಂಬಂಧಗಳನ್ನು ನುಚ್ಚು ನೂರಾಗಿಸುವ ಘಟನೆಯೊಂದು ನಡೆದು ಹೋಗಿದೆ... ಈ ಸುದ್ದಿ ಕೇಳುದ್ರೆ ಒಂದು ಕ್ಷಣ ಹೀಗೂ ಉಂಟಾ ಅಂತೀರಾ… . ಹುಡುಗಿಯೊಬ್ಬಳು ತನ್ನ ಒಡಹುಟ್ಟಿದ ಅಣ್ಣನನ್ನೇ ಮದುವೆಯಾಗಿದ್ದಾಳೆ.. ಇದರ ಹಿಂದಿನ ಕಾರಣ ಮಾತ್ರ ತುಂಬಾ ವಿಚಿತ್ರವಾಗಿದೆ. ತಾನು ಕೂಡ ಆಸ್ಟ್ರೇಲಿಯಾಗೆ ಹೋಗಬೇಕು ಎಂಬ ಆಸೆಯಿಂದ ಕಟುಬಿದ್ದ ತಂಗಿ ಅಣ್ಣನನ್ನೇ ಮದುವೆಯಾಗಿದ್ದಾಳೆ..
ಮದುವೆಯಾದ ನಂತರ ತನ್ನ ಆಸೆಯಂತೆ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಗೆ ಹೋಗಿದ್ದಾಳೆ.. ಆದರೆ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದು, ಇದಾಧ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಈ ಮದುವೆಯ ಆಟದಲ್ಲಿ ಪೋಷಕರು ಹಾಗೂ ಕುಟುಂಬಸ್ಥರೂ ಕೂಡ ಶಾಮೀಲಾಗಿದ್ದರೆಂಬುವುದು ಮತ್ತು ಅಚ್ಚರಿ ಮೂಡಿಸಿದೆ. ವೀಸಾ ಸಮಸ್ಯೆ ಇದ್ದ ಕಾರಣ ಯುವತಿಗೆ ಆಸ್ಟ್ರೇಲಿಯಾಗೆ ಹೋಗುವುದು ಅಸಾಧ್ಯವಾಗಿತ್ತು. ಹೀಗಾಗಿ ಆಕೆ ತನ್ನ ಅಣ್ಣನನ್ನೇ ಮದುವೆಯಾಗಿದ್ದಾಳೆ ಎನ್ನಲಾಗಿದೆ… ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ತನಿಖೆಯಿಂದ ಈವರೆಗೂ ಯುವತಿಯ ಅಣ್ಣ ಆಸ್ಟ್ರೇಲಿಯಾದ ನಾಗರಿಕ ಹಕ್ಕು ಪಡೆದಿದ್ದ, ಹೀಗಾಗಿ ಯುವತಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಗುರುದ್ವಾರದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿ, ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದಾಳೆ. ಬಳಿಕ ಆಸ್ಟ್ರೇಲಿಯಾಗೆ ಹಾರಿದ್ದಾಳೆ ಎಂದಿದ್ದಾಳೆ. ಏನೆ ಆದರೂ ಸಂಬಂಧಗಳಿಗೆ ಬೆಲೆ ಕೊಡಬೇಕಾಗಿರೋದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.. ಹಾಗಾಗಿ ಬೇಡವಾದ ಕೆಲಸಗಳಿಗೆ ಸಂಬಂಧಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಬೇಡ..
Comments