ಗಾಂಧಿಯನ್ನು ರಾವಣನೆಂದು ಕರೆದು ಬಾಪೂ ಫೋಟೋ ಸುಟ್ಟ ಹಿಂದೂ ಮಹಾಸಭಾ ನಾಯಕಿ…!!!

ಜನವರಿ 30 ರಂದು ದೇಶಾದ್ಯಂತ ಗಾಂಧಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ರಾಷ್ಟ್ರಪತಿ ಮಹಾತ್ಮಾ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದ ದಿನ. ಈ ದಿನವನ್ನು ಗಾಂಧಿಯ ಹುತಾತ್ಮ ದಿನವೆಂದು ನಾಡಿನಾದ್ಯಂತ ಶೋಕಾಚರಣೆ ಮಾಡಲಾಗುತ್ತದೆ. ಇಂದು ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಲಕ್ಷಾಂತರ ಹುತಾತ್ಮರನ್ನು ನೆನಯಲಾಗುತ್ತದೆ. ಆದರೆ ಹಿಂದೂ ಮಹಾಸಭಾ ನಾಯಕಿಯೊಬ್ಬರು ಮಹಾತ್ಮ ಗಾಂದೀಜಿ ಹುತಾತ್ಮ ದಿನದಂದೇ ಅವರ ಫೋಟೋಗೆ ಗುಂಡಿಟ್ಟು ಹುತಾತ್ಮ ದಿನಾಚರಣೆಯನ್ನು ಅವಮಾನಿಸಿದ ಘಟನೆ ನಡೆದಿದೆ.
ಗಾಂಧೀಜಿ ಫೋಟೋಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ, ನಾಥುರಾಂ ಗೂಡ್ಸೆ ಗೆಫೋಟೋಗೆ ಮಾಲಾರ್ಪಣೆ ಮಾಡಿರುವ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಬಳಿಕ ಮಾತನಾಡಿದ ಪಾಂಡೆ ನಾವು ಇಂದು ಹೊಸ ಪರಂಪರೆ ಶುರು ಮಾಡಿದ್ದು, ಗಾಂಧಿ ಎಂಬ ರಾವಣನನ್ನು ಗೋಡ್ಸೆ ಎಂಬ ರಾಮ ಹೇಗೆ ಸಂಹರಿಸಿದ ಎಂಬುದನ್ನು ಈ ಆಚರಣೆಯ ಮೂಲಕ ತೋರಿಸಿದ್ದೇವೆ ಎಂದು ಹೇಳಿದ್ದಾರೆ.ಇನ್ನು ಗಾಂಧೀಜೀ ಫೋಟೋಗೆ ಗುಂಡು ಹಾರಿಸಿದ ಆರೋಪದ ಮೇಲೆ ಪೂಜಾ ಶಕುನ್ ಪಾಂಡೆ ಸೇರಿದಂತೆ ಒಟ್ಟು ೧೩ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Comments