ಕೊಡಗಿನ ದಕ್ಷ ಜಿಲ್ಲಾಧಿಕಾರಿ ವರ್ಗಾವಣೆ ಹಿನ್ನಲೆ: ಜನರಿಂದ ತೀವ್ರ ವಿರೋಧ
ಎಲ್ಲರಿಗೂ ತಿಳಿದಿರುವ ಹಾಗೆ ಕೆಲವು ತಿಂಗಳುಗಳ ಹಿಂದೆ ಕೊಡಗಿನಲ್ಲಿ ಪ್ರವಾಹವಾಗಿ ಮನೆ ಮಠಗಳನ್ನು ಕಳೆದುಕೊಂಡರು.ಅಂತಹ ಸಮಯದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಂತಹ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರನ್ನು ವರ್ಗಾವಣೆ ಮಾಡಿ ಎಂದು ಸರ್ಕಾರ ಆದೇಶ ಹೊರಡಿಸಿದೆ.. ಇದಕ್ಕೆ ಜಿಲ್ಲೆಯ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 2 ತಿಂಗಳ ರಜೆ ಮೇರೆಗೆ ತೆರಳಿದ್ದ ಡಿಸಿ ಶ್ರೀ ವಿದ್ಯಾ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಆಗಿದ್ದ ಜಾಯ್ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿದೆ. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕವಾದರೂ ಶ್ರೀ ವಿದ್ಯಾ ಅವರಿಗೆ ಇನ್ನೂ ಸರ್ಕಾರ ಪ್ಲೇಸ್‌ಮೆಂಟ್ ತಿಳಿಸಿಲ್ಲ.
ಈ ವಿಷಯ ಸಂಬಂಧ ಪಟ್ಟಂತೆ ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸಿರುವ ಜನರು, ಕೊಡಗು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಜನರ ಸೌಕರ್ಯಕ್ಕೆ ಹಗಲು ರಾತ್ರಿ ಎಂದು ನೋಡದೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲೂ ಬಹಳ ಶ್ರಮವಹಿಸಿ ಪ್ರತಿಯೊಂದು ಜೀವಗಳಿಗೂ ನಮ್ಮ ಕುಟುಂಬದವರೆಂದು ಸೇವೆಸಲ್ಲಿಸಿದ ಶ್ರೀಮತಿ ಶ್ರೀವಿದ್ಯಾ ರವರ ವರ್ಗಾವಣೆಗೆ ನಮ್ಮ ವಿರೋಧವಿದೆ. ಅಷ್ಟೆ ಅಲ್ಲದೇ ಶ್ರೀ ವಿದ್ಯಾ ವರ್ಗಾವಣೆ ಹಿಂದೆ ಕಾಣದ ಕೈಗಳಿವೆ ಎಂದು ತಿಳಿಸಿದ್ದಾರೆ. ಅಲ್ಲದೇ ವರ್ಗಾವಣೆ ಮಾಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿತ ಪೋಸ್ಟರ್ ಗಳನ್ನು ಹಾಕಿ ಅಭಿಯಾನ ಆರಂಭಿಸಿದ್ದಾರೆ. ಶ್ರೀ ವಿಧ್ಯಾರವರ ವರ್ಗಾವಣೆ ಕುರಿತು ಅಭಿಯಾನಗಳನ್ನ ಶುರು ಮಾಡಿದ್ದಾರೆ…
Comments